ಎಣ್ಣೆ ಕೊಡಲಿಲ್ಲ ಎಂದಿದಕ್ಕೆ ಕ್ಯಾಷಿಯರ್​ ಕೊಲೆ ..ಸ್ಪಾಟ್‌ನಲ್ಲಿದ್ದ ಪೊಲೀಸರು ಎಸ್ಕೇಪ್.!

Jun 9, 2023, 3:16 PM IST

 ಶಿವಮೊಗ್ಗದ ಬಾರ್​ವೊಂದರಲ್ಲಿ ಮೂವರು ತಕರಾರು ಎತ್ತಿದ್ದಕ್ಕೆ, ಕ್ಯಾಷಿಯರ್​ ಪೊಲೀಸರಿಗೆ ಕರೆ ಮಾಡಿ ಕರೆಸಿದ್ದರು. ಇದರಿಂದ ಕೋಪಗೊಂಡ ಮೂವರು ಕ್ಯಾಷಿಯರ್​ನನ್ನು ಪೊಲೀಸರ ಮುಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.ಶಿವಮೊಗ್ಗ ತಾಲೂಕು ಆಯನೂರು ಗ್ರಾಮದಲ್ಲಿ ನವರತ್ನ ಬಾರ್‌ನ ಕ್ಯಾಷಿಯರ್‌ ಸಚಿನ್‌ ಕುಮಾರ್‌ ಮೃತ ವ್ಯಕ್ತಿ. ಸಚಿನ್‌ ನ್ನನು ನಿವಾಸಿಗಳಾದ ನಿರಂಜನ ಸತೀಶ್‌ ಹಾಗೂ ಅಶೋಕ್‌ ನಾಯ್ಕ್‌ ಎಂಬುವವರು ವಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.