ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

Jun 26, 2022, 12:41 PM IST

ತುಮಕೂರು(ಜೂ.26):  ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ವೊಂದು ಸಿಕ್ಕಿದೆ. ಹೌದು, ಕುಖ್ಯಾತ ರೌಡಿಶೀಟರ್‌ಗಳಿಂದಲೇ ನಡೆದಿತ್ತು ಕೊಲೆಗೆ ಸ್ಕೆಚ್‌ ಅಂತ ತಿಳಿದು ಬಂದಿದೆ. ಹತ್ಯೆಗೆ ಸ್ಕೆಚ್‌ ಹಾಕಿದ್ದವನನ್ನೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ತು ದಿನದ ಹಿಂದೆಯೇ ನರಸಿಂಹಮೂರ್ತಿ ಕೊಲೆಗೆ ಸಂಚು ರೂಪಿಸಲಾಗಿತ್ತು. ರೌಡಿಶೀಟರ್‌ ಕಿರಣ್‌ ನರಸಿಂಹಮೂರ್ತಿ ಕೊಲೆಗೆ ಸಂಚು ರೂಪಿಸಿದ್ದನಂತೆ.  ರೌಡಿಶೀಟರ್‌ ಕಿರಣ್‌ ಹಾಗೂ ನರಸಿಂಹಮೂರ್ತಿ ಮಧ್ಯೆ ಸ್ನೇಹವಿತ್ತು. ಏನೇ ವ್ಯವಹಾರ ಮಾಡಿದ್ರೂ ಸಮನಾಗಿ ಹಂಚಿಕೊಳ್ಳುತ್ತಿದ್ದರಂತೆ. ಆದರೆ ಕೆಲವೊಂದು ವ್ಯವಹಾರದಲ್ಲಿ ನರಸಿಂಹಮೂರ್ತಿಯನ್ನ ಕಿರಣ್‌ ಯಾಮಾರಿಸಿದ್ದ, ಹೀಗಾಗಿ ಕಿರಣ್‌ ಹತ್ಯೆಗೆ ನರಸಿಂಹಮೂರ್ತಿ ಸುಪಾರಿ ಕೊಟ್ಟಿದ್ದನು. ಆದರೆ ಸುಪಾರಿ ಕೊಟ್ಟ ನರಸಿಂಹಮೂರ್ತಿಯೇ ಕೊಲೆಯಾಗಿದ್ದನು.  

ರಾಜ್ಯದ ವಿವಿಧೆಡೆ 3 ಭೀಕರ ಅಪಘಾತಗಳು; 8 ಮಂದಿ ಸಾವು