ಅಪರಾಧ ಮಟ್ಟಹಾಕಲು ಮಾಸ್ಟರ್ ಪ್ಲಾನ್; CCBಗೆ ಮೇಜರ್ ಸರ್ಜರಿ

Dec 2, 2019, 12:29 PM IST

ಬೆಂಗಳೂರು (ಡಿ.02): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಸೆಂಟ್ರಲ್ ಕ್ರೈಮ್ ಬ್ರಾಂಚ್‌ಗೆ (CCB) ಮೇಜರ್ ಸರ್ಜರಿ ಮಾಡಲಾಗಿದೆ. 

ಕಳೆದ ಮೂರು ದಶಕಗಳಿಂದ ಬೆಂಗಳೂರಿನ  ಚಾಮರಾಜಪೇಟೆಯಿಂದ ಕಾರ್ಯಾಚರಿಸುತ್ತಿರುವ CCB ಈಗ ನಗರದ ವಿವಿಧ ಕಡೆ ತನ್ನ ಕಚೇರಿಗಳನ್ನು ಹೊಂದಲಿದೆ. ಆದರೆ ಕೆಲವು ಹಿರಿಯ ಅಧಿಕಾರಿಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.