Jul 2, 2021, 6:58 PM IST
ಚಿಕ್ಕೋಡಿ(ಜು. 02) ಆಫ್ರಿಕಾದಲ್ಲಿ ಕುಳಿತು ಭಾರತದ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ಭಾರತದ ಅದರಲ್ಲೂ ಕರ್ನಾಟಕದ ಅಕೌಂಟ್‌ಗಳಿಗೆ ಸೇರಿದ 95 ಲಕ್ಷ ರೂಪಾಯಿ ಹಣವನ್ನು ಎಗರಿಸಿದ್ದರು.
ಆನ್ ಲೈನ್ ನಲ್ಲಿ ಬಟ್ಟೆ ಬಿಚ್ಚಿದರೆ ಅಷ್ಟೆ ಕತೆ
ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿತ್ತು. ಚಿಕ್ಕೋಡಿ ಡಿಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಸುಮಾರು 94.71 ಲಕ್ಷ ಎಗರಿಸಿದ್ದ 3 ಜನ ಆರೋಪಿಗಳ ಬಂಧನವಾಗಿದೆ. ಅರಿಹಂತ ಸಂಸ್ಥೆ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಐಸಿಐಸಿಐ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಹಣ ಎಗರಿಸಿದ್ದರು.
ಎರಡು ಬಾರಿ ಅಶೋಕ್ ಬಂಕಾಪುರೆ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ, ಇಂದ್ರೇಶ್ ಹರಿಶಕಂರ್ ಪಾಂಡೆ, ಅಭಿಜಿತ್ ಘನಶ್ಯಾಮ್ ಮಿಶ್ರಾ ರನ್ನು ಬಂಧಿಸಲಾಗಿದೆ. ಆಫ್ರಿಕಾ ದೇಶದಲ್ಲಿರುವ ಟೋನಿ ಎಂಬ ವ್ಯಕ್ತಿ ಸಂಪೂರ್ಣ ಹ್ಯಾಕಿಂಗ್ ಜಾಲಕ್ಕೆ ಸೂತ್ರಧಾರ.