Mar 24, 2022, 12:28 PM IST
ಮೈಸೂರು(ಮಾ. 24) ಆಕೆ ರಕ್ತದಲ್ಲಿನ ಕಲ್ಮಶ ಹುಡುಕಿ ವೈದ್ಯರಿಗೆ ತಿಳಿಸುವ ಲ್ಯಾಬ್ ಟೆಕ್ನಿಷಿಯನ್. ಈತನೂ ಆಸ್ಪತ್ರೆಗಳಿಗೆ ಔಷಧಿ ಸಾಗಿನೋ ವಾಹನದ ಚಾಲಕ. ಫೀಲ್ಡಲ್ಲಿ ಓಡಾಡಿಕೊಂಡಿದ್ದಾಗ ಪರಿಚಯವಾಗಿ, ಆ ಪರಿಚಯ ಪ್ರೇಮಾಂಕುರಕ್ಕೆ (Love) ಕಾರಣ ಆಗಿದೆ. ಜಾತಿ ಬೇರೆಯಾದರೇನಂತೆ ಎಂದು ಕುಟುಂಬ ಎದುರಿಸಿ ಮದುವೆಯಾದವನಿಗೆ ಮಗು ಹುಟ್ಟುವ ವೇಳೆಗೆ ಜಾತಿಯ (Caste) ಹುಳು ತಲೆ ಹೊಕ್ಕಿದೆ. ಇದೇ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು(Pregnant) ನಿರ್ಭಯವಾಗಿ ಕೊಂದು (Murder) ಕೆರೆಗೆ ಎಸೆದಿದ್ದಾನೆ ದುರುಳ.
Child Marriage ಕೊರೋನಾ ವೇಳೆ ರಾಜ್ಯದಲ್ಲಿ 296 ಬಾಲ್ಯ ವಿವಾಹ, ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು!
ಪ್ರೀತಿ ಕುರುಡು ಆಂತಾರೆ ಓಕೆ. ಆದ್ರೆ ಸಂಸಾರ ಕಣ್ಣು ಮುಚ್ಚಿದರೆ ನಡೆದರೆ ಸಾಗದು. ಈ ದಾರುಣ ಪ್ರಕರಣದಲ್ಲೂ ಅದೇ ಆಗಿದೆ. ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಕೆರೆಗೆ ಎಸೆದಿದ್ದಾನೆ. ಮೈಸೂರು (Mysuru) ನಗರದ ಹೊರ ವಲಯ ಬೆಳವಾಡಿ ಕೆರೆಯಲ್ಲಿ ಘಟನೆ ನಡೆದಿದೆ.