Mar 6, 2024, 12:36 PM IST
ಬೆಂಗಳೂರು (ಮಾ.06): ಅಮ್ಮನೆಂದರೆ ದೇವರು. ಅಮ್ಮನೆಂದರೆ ಸರ್ವಸ್ವವೂ ಹೌದು. ಅಮ್ಮನಿಲ್ಲದೆ ಎಲ್ಲವೂ ಶೂನ್ಯ. ಅಮ್ಮ ಎಂಬ ಹೆಸರು ಕೇಳಿದ್ರೆ ಸಾಕು ಮಕ್ಕಳಿಗೆ ನೂರಾನೆ ಬಲ ಬರುತ್ತೆ. ಅಮ್ಮನ ಬಗ್ಗೆ ಹೇಳುವುದೇನಿದೆ, ಅಮ್ಮನಿಗೆ ಅಮ್ಮನೇ ಸಾಟಿ. ಈ ಪ್ರಪಂಚದಲ್ಲಿ ಅಮ್ಮನ ಸ್ಥಾನ ತುಂಬಲು ಆ ದೇವರಿಂದಲೂ ಸಾಧ್ಯವಿಲ್ಲ. ಆದ್ರೆ, ಏನ್ಮಾಡೋದು ಇಂದಿನ ಈ ಕಾರ್ಯಕ್ರಮದಲ್ಲಿ ನಾವು ಕ್ರೂರಿ ಅಮ್ಮನ ಬಗ್ಗೆ ಮಾತನಾಡಬೇಕಿದೆ. ಅವಳು ಅಮ್ಮನಲ್ಲ ರಾಕ್ಷಸಿ, ಅಂತ ಒಬ್ಬ ರಾಕ್ಷಸಿ ಬಗ್ಗೆ ಮಾತನಾಡಬೇಕಿದೆ. ಅವಳು ನಿಜಕ್ಕೂ ತಾಯಿ ಅಲ್ಲವೇ ಅಲ್ಲ ಅವಳೊಬ್ಬ ರಾಕ್ಷಸಿ. ಇದೇ ಈ ಕ್ಷಣದ ವಿಶೇಷ ಅಮ್ಮ ಅಲ್ಲ ರಾಕ್ಷಸಿ. ಸ್ಥಳೀಯರ ಜಾಗೃತಿಯಿಂದ ಇಂದು ಈ ಮಗುವಿನ ಜೀವ ಉಳಿದಿದೆ. ವಿಷಯ ತಿಳಿದ ಸ್ಥಳೀಯರು ಮುಂದೆ ಏನ್ಮಾಡಿದ್ರು. ಅಕ್ಕ-ಪಕ್ಕದವರ ಜಾಗೃತಿಯಿಂದ ಮಗು ಜೀವ ಉಳಿದಿದೆ ಎಂದು ಹೇಳಿದ್ರೂ ತಪ್ಪಿಲ್ಲ.
ಇಲ್ಲಾಂದ್ರೆ ಹೀಗೆ ಬಿಟ್ಟಿದ್ರೆ ಯಾವತ್ತೋ ಒಂದು ದಿನ ಮಗುವನ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆ ಮಹಾ ತಾಯಿಯ ರಕ್ಕಸತನ ಎಷ್ಟು ಹೇಳಿದ್ರೂ ಸಾಕಾಗೋದಿಲ್ಲ. ಅವಳ ಘನಂದಾರಿ ಕೆಲಸದ ಕುರಿತು ಸ್ಥಳೀಯರು ಇನ್ನೂ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ ಇವಳ್ಯಾಕೆ ಇಷ್ಟೊಂದು ಕ್ರೂರವಾಗಿ ವರ್ತಿಸಿದಾಳೆ. ಇವಳೇನಾದ್ರು ಮಾನಸಿಕ ಅಸ್ತವ್ಯಸ್ಥೆನಾ? ಅಥವಾ ಗಂಡನ ಕೋಪ ಮಗನ ಮೇಲೆ ಹಾಕ್ತಿದ್ಲಾ? ಅಥವಾ ಇನ್ನೇನಾದ್ರು ಕಾರಣವಿತ್ತಾ?. ಈ ಕಾರ್ಯಕ್ರಮ ಯಾರಿಗೂ ಆದರ್ಶವಲ್ಲ ಬದಲಾಗಿ ಒಂದು ಎಚ್ಚರಿಕೆ. ಮದುವೆ ಆಗುವವರೆಗೂ ನಮ್ಮಿಷ್ಟದ ಬದುಕಾಗಿರುತ್ತೆ ಮದುವೆ ನಂತರ ಗಂಡ ಹೆಂಡ್ತಿಯ ಹೊಂದಾಣಿಕೆ ಬದುಕಾಗುತ್ತೆ. ಹಾಗೆನೇ ಮಕ್ಕಳಾದ ಮೇಲೆ ಗಂಡ ಹೆಂಡ್ತಿ ಇಬ್ಬರದ್ದೂ ಮಕ್ಕಳಿಗೋಸ್ಕರ ಬದುಕುವ ಜೀವನವಾಗುತ್ತೆ. ಮಕ್ಕಳು ದೇವರ ಸಮ ಎಂದು ಹೇಳ್ತಾರೆ. ಆ ದೇವರಿಗೆನೇ ಇಷ್ಟೊಂದು ಶಿಕ್ಷೆ ಕೊಟ್ಟಿರುವ ಇವಳು ಮುಂದೆ ಏನಾಗ್ತಾಳೋ.