ಅಥರ್ವ ವೆಬ್ ಸೀರೀಸ್‌ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಿಂಚಿಂಗ್..!

Feb 3, 2022, 4:42 PM IST

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ (MS Dhoni) ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಥರ್ವ (Atharva) ಎಂಬ ಪೌರಾಣಿಕ ವೆಬ್‌ ಸರಣಿಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ತಮಿಳು ಬರಹಗಾರ ರಮೇಶ್‌ ತಮಿಳ್‌ಮಣಿ ಬರೆದ ಕಥೆಯನ್ನು ಆಧರಿಸಿ, ಧೋನಿ ಎಂಟರ್‌ಟೈನ್‌ಮೆಂಟ್‌ ಎಂಬ ಮಾಧ್ಯಮ ಸಂಸ್ಥೆ ಈ ಸರಣಿಯನ್ನು ನಿರ್ಮಾಣ ಮಾಡಿದೆ. 

IPL Broadcasting Rights: 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..!

ಬುಧವಾರ ಧೋನಿ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ವೆಬ್‌ ಸರಣಿಯ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ರಾಕ್ಷಕರ ವಿರುದ್ಧ ಹೋರಾಡುವ ಅನಿಮೇಟೆಡ್‌ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.