Coronavirus Karnataka
Mar 24, 2020, 9:43 PM IST
ಬೆಂಗಳೂರು (ಮಾ. 24): ಕೊರೋನಾ ವಿರುದ್ಧ ಹೋರಾಟದಲ್ಲಿ ವೈದ್ಯರು ಹಾಗೂ ಪೊಲೀಸರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಬಿಸಿಲು, ಹಸಿವು, ಹಗಲು, ಇರುಳು ಯಾವುದನ್ನೂ ಲೆಕ್ಕಿಸದೇ ಬೀದಿಗಿಳಿದ ಪೊಲೀಸರಿಗೆ ವಿಶೇಷವಾದ ಅಭಿನಂದನೆ ಸಲ್ಲಲೇಬೇಕು. ಲಾಕ್‌ಡೌನ್‌ಗೂ ಬಗ್ಗದ ಜನ ಪೊಲೀಸರು ಲಾಠಿಗೆ ಕೆಲಸ ಕೊಟ್ಟ ತಕ್ಷಣ ಮನೆ ಸೇರಿಕೊಂಡರು. ನಿಮ್ಮ ಕರ್ತವ್ಯ ನಿಷ್ಠೆಗೆ ಇಡೀ ಕರ್ನಾಟಕ ಸಲಾಂ ಎನ್ನುತ್ತಿದೆ ಪೊಲೀಸರೇ!