Coronavirus Karnataka
Apr 10, 2020, 5:12 PM IST
ಬೆಂಗಳೂರ(ಏ.10): ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ರೈತರು ತಮ್ಮ ಬೆಳೆಯನ್ನು ಮಾರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ. ಸುರೇಶ್ ರೈತರ ನೆರವಿಗೆ ಧಾವಿಸಿದ್ದಾರೆ.
ಹಾಸನದ ಅರಸೀಕೆರೆಯಲ್ಲಿ ರೈತರಿಂದ ಹಣ್ಣು-ತರಕಾರಿಗಳನ್ನು ಖರೀದಿಸಿ, ಬಡವರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಸ್ವತಃ ಸಂಸದ ಸುರೇಶ್ ರೈತರ ಹೊಲಗಳಿಗೆ ತೆರಳಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿದ್ದಾರೆ.
100 ಟನ್ ಕಲ್ಲಂಗಡಿ ಹಣ್ಣು ಹಾಗೂ 50 ಟನ್ ಟೊಮೊಟೋ ಹಣ್ಣು ಖರೀದಿಸಿ ರೈತರಿಗೆ ಹಂಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.