Coronavirus Karnataka
Apr 8, 2020, 3:43 PM IST
ಕಲಬುರಗಿ(ಏ.08): ನಗರದಲ್ಲಿ 72 ವರ್ಷದ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 9ಕ್ಕೇರಿಕೆಯಾಗಿದೆ. 72 ವರ್ಷದ ವೃದ್ಧೆಗೆ ಬಂದಿರುವುದು ಹೇಗೆ ಎಂಬ ಚರ್ಚೆ ಕೂಡ ಆರಂಭವಾಗಿದೆ.
ಕಲಬುರಗಿಯಲ್ಲಿ ಒಂದೇ ಕುಟುಂಬದ ಅತ್ತೆ-ಸೊಸೆಗೆ ಕೊರೋನಾ ಸೋಂಕು ದೃಢ..!
65 ವರ್ಷದ ಮಗನಿಂದ 72 ವರ್ಷದ ತಾಯಿಗೆ ಕೊರೋನಾ ಸೋಂಕು ಹೇಗೆ ಬಂದಿದ್ದೇಗೆ? ಸೋಂಕಿತರಿಗೆ ಜ್ವರ ಬಂದಿಲ್ಲ, ಶೀತ, ಕೆಮ್ಮು, ಗಂಟಲು ನೋವು ಇಲ್ಲವೇ ಇಲ್ಲ, ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋದಾಗ ಕೊರೋನಾ ಸೋಂಕು ಪತ್ತೆಯಾಗಿದೆ.