Coronavirus Karnataka

ಮಗನಿಂದ ತಾಯಿಗೆ ಹರಡಿದ ಡೆಡ್ಲಿ ಕೊರೋನಾ ಸೋಂಕು..!

Apr 8, 2020, 5:05 PM IST

ಕಲಬುರಗಿ(ಏ.08): ರಾಜ್ಯದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕಲಬುರಗಿಯಲ್ಲಿ ಮತ್ತೊಂದು ಕೋವಿಡ್ 19 ಸೋಂಕು ಪತ್ತೆಯಾಗಿದೆ.

ಕಲಬುರಗಿಯಲ್ಲಿ ಒಂದೇ ಕುಟುಂಬದ ಅತ್ತೆ-ಸೊಸೆಗೆ ಕೊರೋನಾ ಸೋಂಕು ದೃಢ..!

ಹೌದು, ಕಲಬುರಗಿಯ 72 ವರ್ಷದ ವೃದ್ದೆಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮಗನಿಂದ ತಾಯಿಗೆ ಸೋಂಕು ಹರಡಿರುವ ಆಘಾತಕಾರಿ ಮಾಹಿತಿ ಹೊರಬಂದಿದೆ. ಇದರೊಂದಿಗೆ ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 

"

ಮಂಗಳವಾರದವರೆಗೂ ಕಲಬುರಗಿಯಲ್ಲಿ 7 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದವು. ಆದರೆ ಇಂದು ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.