Coronavirus Karnataka
Apr 5, 2020, 7:21 PM IST
ಚಿಕ್ಕಬಳ್ಳಾಪುರ (ಏ.05): ಚಿಕ್ಕಬಳ್ಳಾಪುರದ ಗುಡಿಬಂಡೆಯ ಮನೆಯೊಂದರಲ್ಲಿ, ಲಾಕ್‌ಡೌನ್ ನಡುವೆಯೂ ಬೇರೆ ಕಡೆಯಿಂದ ಬಂದು ಠಿಕಾಣಿ ಹೂಡಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ವಾಸ್ತವ್ಯವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲವರಲ್ಲಿ ಕೊರೋನಾಸೋಂಕಿನ ಲಕ್ಷಣಗಳು ಕೂಡಾ ಕಾಣಿಸಿಕೊಂಡಿವೆ ಎಂದು ಹೇಳಲಾಗಿದೆ.