Coronavirus India
Mar 28, 2020, 3:41 PM IST
ಬೆಂಗಳೂರು(ಮಾ.28): ರೋಗಿಗಳ ಸೋಗಿನಲ್ಲಿ ಆಂಬ್ಯುಲೆನ್ಸ್ ಏರಿದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಗಾಯವಾಗಿದೆ ಎಂದು ಆಂಬ್ಯುಲೆನ್ಸ್ ಮೂಲಕ ಊರಿಗೆ ಹೊರಟಿದ್ದ ಯುವಕರನ್ನು ಬಂಧಿಸಲಾಗಿದೆ.
ಕೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ 8 ಜನ ಯುವಕರನ್ನು ಬಂಧಿಸಲಾಗಿದೆ. ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ದೇಶದಲ್ಲಿ ಲಾಕ್‌ಡೌನ್ ಹೇರಿದ್ದರೂ ಈ ರೀತಿ ಸುಳ್ಳು ಹೇಳಿ ಊರಿಗೆ ಹೊರಟವರು ಈಗ ಸೆರೆಮನೆಯಲ್ಲಿದ್ದಾರೆ.
ಕೊರೋನಾ ಏನೇನ್ ಮಾಡಿಸ್ತಿದೆ ನೋಡಿ..! ಊರೊಳಗೆ ಕಾಲಿಟ್ರೆ ದೈವಕ್ಕೆ ಹರಕೆ..!
ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದ್ದು, ಜನರು ಹೊರಗೆ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗಿದ್ದರೂ ಸುಳ್ಳು ಸೋಗಿನಲ್ಲಿ ಬಂದವರನ್ನು ಪೊಲೀಸರು ಬಂಧಿಸಿದ್ದಾರೆ.