ಅನುದಿನವೂ ಜಿಮ್​ನಲ್ಲಿ ಕಂಗನಾ ರಣಾವತ್ ಕಸರತ್ತು: ಕಳೆದರೂ ಎರಡು ದಶಕ.. ಬದಲಾಗದ ರೂಪ!

Jan 11, 2025, 4:12 PM IST

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ. ಕಂಗನಾ ರಣೌತ್. ಸಿನಿಇಂಡಸ್ಟ್ರಿಗೆ ಬಂದು ಆಲ್  ಮೋಸ್ಟ್ ಎರಡು ದಶಕ ಆಯ್ತು. ಆರಂಭದಲ್ಲಿ ಬಿಚ್ಚಮ್ಮನಾಗಿ ಬಂದ ಈಕೆ ಬಳಿಕ ತನ್ನ ಪ್ರಭುದ್ದ ನಟನೆಯಿಂದ ರಾಷ್ಟ್ರಪ್ರಶಸ್ತಿ ಬಾಚಿಕೊಂಡಳು. ಇದೀಗ ಸಂಸದೆಯಾಗಿ ಸಂಸತ್ತು ಮೆಟ್ಟಿಲೇರಿದ್ದಾಳೆ ಕಂಗಾನಾ. ಎಂ.ಪಿಯಾದ ಮೇಲೆ ನಟನೆ  ಮುಂದುವರೆಸಿರೋ ಕಂಗಾನರ ಎಮರ್ಜೆನ್ಸಿ ಸಿನಿಮಾ ಈಗ ರಿಲೀಸ್​ಗೆ ಸಜ್ಜಾಗಿದೆ. ಕಂಗನಾ ಒಂಥರಾ ಯಾವುದೇ ಪಾತ್ರ ಕೊಟ್ಟಿರೂ ಆ ಪಾತ್ರಕ್ಕೆ ತಕ್ಕಂತೆ ರೆಡಿಯಾಗೋ ಬೆಡಗಿ. ಎರಡು ದಶಕ ಕಳೆದರೂ ಕಂಗನಾ ರೂಪ ಬದಲಾಗಿಲ್ಲ. ಈಕೆಯ ಏಳು ಮಲ್ಲಿಗೆ ತೂಕದಲ್ಲಿ ಇಂದು ಗ್ರಾಂ ಹೆಚ್ಚೂ ಆಗಿಲ್ಲ. ಒಂದು ಗ್ರಾಂ ಕಮ್ಮಿನೂ ಆಗಿಲ್ಲ. ತನ್ನ ಸೌಂದರ್ಯದ ಗುಟ್ಟು ವರ್ಕೌಟು ಅನ್ನೋ ಕಂಗನಾ, ಅನುದಿನವೂ ಜಿಮ್​ನಲ್ಲಿ ಬೆವರಿಸ್ತಾರೆ. ಕಂಗನಾ ಕಸರತ್ತು ಮತ್ತದರ ಗಮ್ಮತ್ತು ಹೇಗಿರುತ್ತೆ ಅಂತ ನೀವೂ ಒಮ್ಮೆ ನೋಡ್ಕೊಂಡ್ ಬನ್ನಿ.