Apr 7, 2023, 4:11 PM IST
ಯಶ್ 19ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.ದಿಲ್ ರಾಜು ನಿರ್ಮಾಣದ ಅನೇಕ ಸಿನಿಮಾಗಳು ಹಿಟ್ ಆಗಿವೆ. ಇತ್ತೀಚೆಗೆ ತೆರೆಗೆ ಬಂದ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಬಾಕ್ಸ್ ಆಫೀಸ್ನಲ್ಲಿ ಲೂಟಿ ಮಾಡಿತ್ತು. ಸದ್ಯ ರಾಮ್ ಚರಣ್ ನಟನೆಯ 15ನೇ ಸಿನಿಮಾ ‘ಗೇಮ್ ಚೇಂಜರ್’ನ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಮಧ್ಯೆ ಹೊಸ ಅಪ್ಡೇಟ್ ಒಂದು ಸಿಕ್ಕಿದ್ದು ಯಶ್‌ಗೆ ದಿಲ್ ರಾಜು ಬಂಡವಾಳ ಹೂಡುತ್ತಾರೆ ಎಂದು. ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ‘ಕೆಜಿಎಫ್ 2’ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಈವರೆಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಮಧ್ಯೆ ದಿಲ್ ರಾಜು ಪೋಸ್ಟ್ ವೈರಲ್ ಆಗಿದೆ. ಯಶ್ 19ನೇ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.