ಇದು ಶಾಲಿನಿ ಫಾತಿಮಾ ಆದ ಕತೆ....‘ದಿ ಕೇರಳ ಸ್ಟೋರಿʼಸಿನಿಮಾದಲ್ಲಿದೆ ಮತಾಂತರ, ಲವ್ ಜಿಹಾದ್ ಕತೆ..!

May 2, 2023, 2:10 PM IST

ಕೆಲವೊಮ್ಮ  ಸಿನಿಮಾಗಳು ಕೇವಲ ಮನರಂಜನಾ ಉದ್ದೇಶ ಮಾತ್ರವಲ್ಲದೆ ಕೆಲವೊಮ್ಮೆ ಸಮಾಜದ ಕನ್ನಡಿಯಾಗಿರುತ್ತವೆ.  ಎಚ್ಚರಿಕೆ ನೀಡುತ್ತವೆ ಸತ್ಯ ಘಟನೆಯನ್ನ ಚಿತ್ರಿಸಿ ಬೆಚ್ಚಿ ಬೀಳಿಸುತ್ತವೆ. ಕಾಶ್ಮೀರಿ ಫೈಲ್ಸ್ ನಂತರ ಈಗ ಸಮಾಜದ ಗಮನ ಸೆಳೆದು ಅತ್ಯಂತ ಚರ್ಚೆಯಾಗುತ್ತಿರುವ ಸಿನಿಮಾ ದಿ ಕೇರಳ ಸ್ಟೋರಿಯಾಗಿದೆ. ಬಾಲಿವುಡ್‌ ನಟಿ ಅದಾ ಶರ್ಮಾ ನಟನೆಯ ಬಹುನಿರೀಕ್ಷಿತ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಅದಾ ಶಾಲಿನಿ ಉನ್ನಿಕೃಷ್ಣನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂದೂ ಕುಟುಂಬಕ್ಕೆ ಸೇರಿದ ಶಾಲಿನಿ ಫಾತಿಮಾ ಆದ ರೋಚಕ ಕಥೆ ಮತ್ತು ಫಾತಿಮಾ ಸುತ್ತ ನಡೆಯುವ ಘಟನೆಯನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಆದ್ರೆ, ಈ ಕಥೆ ಕೇವಲ ಶಾಲಿನಿಯದ್ದಲ್ಲ. ಬದಲಿಗೆ ಕೇರಳದಿಂದ ನಾಪತ್ತೆಯಾದ ಆಕೆಯಂತಹ 32 ಸಾವಿರ ಯುವತಿಯರ ದಂತಕಥೆ ಎನ್ನುವುದು ಇದೀಗ ಸಂಚಲನಕ್ಕೆ ಕಾರಣವಾದ ವಿಚಾರ.