ಕೆಜಿಎಫ್ 3ನಲ್ಲಿ ಯಶ್ ಜೊತೆ ಮತ್ತೊಬ್ಬ ಕಾಲಿವುಡ್ ಸೂಪರ್‌ ಸ್ಟಾರ್: ಬಿಳಿ ಗಡ್ಡದ ಜೊತೆ ಕಪ್ಪು ಗಡ್ಡ!

Jul 26, 2024, 12:30 PM IST

ರಾಕಿಂಗ್ ಸ್ಟಾರ್.. ತಲಾ ಅಜಿತ್! ಹೀರೋ ಯಾರು? ವಿಲನ್ ಯಾರು..?  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ನಲ್ಲಿರೋ ಸುದ್ದಿ ಇದಾಗಿದೆ. ಕೆಜಿಎಫ್ 3 ಶುರುವಾಗುತ್ತೆ ಅಂದ್ರೆನೆ  ಒಂದು ಥ್ರಿಲ್ಲಿಂಗ್ ನ್ಯೂಸ್.. ಅದರಲ್ಲೂ ಯಶ್ ಜೊತೆಗೆ ಮತ್ತೊಬ್ಬ ಸೂಪರ್ಸ್ಟಾರ್ ಕೆಜಿಎಫ್3 ನಲ್ಲಿ ಇರ್ತಾರೆ ಅಂದ್ರೆ  ಆ ಸಿನಿಮಾಗೆ ಇನ್ನಷ್ಟು ಬಲ ಬಂದು ಬಿಡುತ್ತದೆ. ಸದ್ಯ ಎಲ್ಲ ಚಿತ್ತ ಕೆಜಿಎಫ್ 3ನತ್ತ ಹೊರಳಿದೆ. ಹೌದು ಹೊಂಬಾಳೆ ಸಂಸ್ಥೆ ಕೆಜಿಎಫ್3  ಬರೋದು ಖಚಿತವೆಂದು ಈಗಾಗಲೆ  ಅನೌನ್ಸ್ ಮಾಡಿದೆ.  ‘ಕೆಜಿಎಫ್ 3’ ಸಿನಿಮಾದಲ್ಲಿ ಯಶ್ ಜೊತೆಗೆ ತಮಿಳೂ ಸೂಪರ್ ಸ್ಟಾರ್ ಅಜಿತ್ ಸಹ ಇರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. 

ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಸಂಸ್ಥೆ ಈ ಬಗ್ಗೆ ಅಜಿತ್ ಜೊತೆ ಮಾತನಾಡಿದ್ದು ಅಜಿತ್ ಸಹ ಸಿನಿಮಾಕ್ಕೆ ಓಕೆ ಹೇಳಿದ್ದಾರೆ. ಎನ್ನಲಾಗಿದೆ. ಅಸಲಿಗೆ ಅಜಿತ್ ಜೊತೆಗೆ ಪ್ರಶಾಂತ್ ನೀಲ್ ಎರಡು ಸಿನಿಮಾಗಳನ್ನು ಮಾಡಲಿದ್ದಾರೆ.  ಅದರಲ್ಲಿ ಒಂದು ‘ಕೆಜಿಎಫ್ 3’. ಎನ್ನಲಾಗಿದ್ದು ಈ ಸುದ್ದಿ ಇದೀಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸುದ್ದಿಯಾಗುತ್ತಿದೆ. ಯಶ್ ಖಡಕ್ ಲುಕ್ ಜೊತೆ ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಅಜಿತ್..ಕಪ್ಪು ಗಡ್ಡದ ವಿರುದ್ಧ ಅಜಿತ್ರ ಬಿಳಿ ಗಡ್ಡದ ಕಾಂಬಿನೇಶನ್ ತೆರೆಯ ಮೇಲೆ ಭರ್ಜರಿಯಾಗಿರಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ‘ಕೆಜಿಎಫ್ 3’ ಸಿನಿಮಾದ ಚಿತ್ರೀಕರಣ 2025 ರಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದ್ದು, ಸಿನಿಮಾ 2026ರ ಅಂತ್ಯಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. 

ಅದಕ್ಕೂ ಮುಂಚೆಯೇ ಅಜಿತ್ ಗಾಗಿ ಒಂದು ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಎನ್ನುತ್ತಿದ್ಧಾರೆ. ಯಶ್ ಅಜಿತ್ ಇಬ್ಬರಲ್ಲಿ ಯಾರು ವಿಲನ್..? ಯಾರು ಹೀರೋ..? ಯಶ್ ವಿಲನ್ ಆಗಿರಬಹುದು.. ಅಜಿತ್ ಹೀರೋ ಆಗಿರಬಹುದು ಎಂದೆಲ್ಲಾ ಟಾಕ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೆ ಚರ್ಚೆಗಳು ನಡೆಯುತ್ತಿವೆ.  ಯಶ್  ಕೆಜಿಎಫ್ ಮೊದಲೆರಡು ಭಾಗದಲ್ಲಿ ಡಾನ್ ಪಾತ್ರವನ್ನೆ ಮಾಡಿದ್ದರಿಂದ ಅದೆ ಕಂಟಿನ್ಯೂ ಆಗಬಹುದು. ಯಶ್ರನ್ನ ತಡೆಯೋ ಕ್ಯಾರೆಕ್ಟರ್ನಲ್ಲಿ ಅಜಿತ್ ಬರಬಹುದು ಎನ್ನಲಾಗಿದೆ. ಸದ್ಯ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ನಟನೆ ನಿರ್ಮಾಣ ಎರಡರಲ್ಲೂ ಬಿಜಿಯಾಗಿದ್ದಾರೆ. ಅದರ ಬಳಿಕ ಅವರು ‘ಕೆಜಿಎಫ್ 3’ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಜೊತೆಗೆ ಬಾಲಿವುಡ್ ರಾಮಾಯಣವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಅಜಿತ್ ಪ್ರಸ್ತುತ ‘ವಿಡ ಮುಯರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ವಿಡ ಮುಯರ್ಚಿ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ‘ಗುಡ್ ಬ್ಯಾಡ್ ಆಂಡ್ ಅಗ್ಲಿ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವೂ ಆಗಿಬಿಟ್ಟಿದೆ. ಎರಡು ಸಿನಿಮಾಗಳನ್ನು ಮುಗಿಸಿದ ಬಳಿಕ ನೀಲ್ ಜೊತೆಗಿನ ಸಿನಿಮಾ ಆರಂಭವಾಗಲಿದೆ.  ಹೊಂಬಾಳೆ ಸಂಸ್ಥೆಯ ಯಶ್ – ಅಜಿತ್ ಸಂಗಮ  ಸುದ್ದಿ ನಿಜವಾಗುತ್ತದೆಯೇ ..? ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆಯೇ..? ಅಥವಾ ಇನ್ನೂ ಇದು ಮೊದಲ ಮಾತುಕತೆಯ ಹಂತದಲ್ಲಿಯೇ ಇದೆಯೇ..? ಯಾವುದಕ್ಕೂ ವೈಟ್ಮಾಡಿ,, ಥ್ರಿಲ್ಲಿಂಗ್ ನ್ಯೂವ್ಸ್ ಅಂತೂ ಬಂದಿದೆ.