AI ಹುಡುಗಿ ಹೂವಾಗ್ತಾಳೆ.. ಪ್ರಾಣಿಯೂ ಆಗ್ತಾಳೆ: ಹೀಗೆಲ್ಲಾ ಸಾಧ್ಯಾನಾ ಅಂತ ಒಂದು ಕ್ಷಣ ನಿಮ್ಗೆ ಅನ್ಸೇ ಅನ್ಸುತ್ತೆ!

Dec 12, 2024, 2:07 PM IST

ಮೈ ಜುಂ ಅನ್ಸುತ್ತೆ.. ಹೀಗೆಲ್ಲಾ ಸಾಧ್ಯಾನಾ  ಅಂತ ಒಂದು ಕ್ಷಣ ನಿಮ್ಗೆ ಅನ್ಸೇ ಅನ್ಸುತ್ತೆ.. ಇವರೆಲ್ಲಾ ಮನಷ್ಯರೇ ಹೌದಾ ಅಂತ ಅನುಮಾನ ಹುಟ್ಟುತ್ತೆ. ಅಂಥಹ ಒಂದಿಷ್ಟು ವಿಡಿಯೋಗಳಿವೆ. ಇಲ್ಲಾ ಬಿಡ್ರಿ, ಇದೆಲ್ಲಾ ನಮ್ಗೆ ನಿಮ್ಗೆ ಆಗೋ ಮಾತೇ ಅಲ್ಲಅನ್ನಿಸುವಂತಹ ದೃಶ್ಯಗಳು ಇವೆ. ಜಗತ್ತಿನಲ್ಲಿ ಎಐ ಮಾಡ್ತಿರೋ ಮ್ಯಾಜಿಕ್ ಇದ್ಯಲ್ಲಾ.. ಅದ್ನ ನೋಡ್ತಾ ಇದ್ರೆ, ಕಣ್ಣು ಮುಚ್ಚೋಕು ಮನಸ್ಸಾಗಲ್ಲ. ಅಷ್ಟು ಮಸ್ತ್ ಆಗಿವೆ. ಇದೇ ಈ ಹೊತ್ತಿನ ವಿಶೇಷ. ಇದು ಎಐ ಜಮಾನ… ಇದ್ರಿಂದ ಮುಂದೆ ಮಹಾ ಆಪತ್ತು ಕಾದಿದೆ…ಮಾನವ ಕುಲಕ್ಕೆ ಮುಂದೊಂದು  ದಿನ ಈ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಂಟಕವಾಗಬಹುದು. ಹೀಗೆ ಹಲವು ಗಂಭೀರ ವಿಚಾರಗಳಿವೆ. ಆದ್ರೆ ಅದೆನೆಲ್ಲಾ ಒಂಚೂರು ಪಕ್ಕಕ್ಕಿಟ್ರೆ, ಈಗ ಎಐ ಮೂಲಕ ಕ್ರಿಯೆಟ್ ಮಾಡಿರುವ ಒಂದಿಷ್ಟು ಸಖತ್ ಆಗಿರೋ ವಿಡಿಯೋಗಳಿವೆ. ಇಲ್ಲಿ ಹುಡುಗಿ ನವಿಲಾಗ್ತಾಳೆ.. ತಿಮಿಂಗಲ ಆಗ್ತಾಳೆ.. ತೋಳವು ಆಗ್ತಾಳೆ. 

ಮತ್ತೆ ಇನ್ನು ಏನ್ ಏನ್ ಆಗ್ತಾಳೆ..? ಈಗ ನೋಡಿದ್ರಲ್ಲಾ ಇದೆಲ್ಲವೂ ಎಐನಿಂದ ಕ್ರಿಯೆಟ್ ಆಗರೋದು. ಅದ್ರೆ ನಿಜವಾಗಿಯೂ ಪ್ರಾಣಿಗಳ ರೀತಿ ಮನುಷ್ಯರು ಕಾಣಿಸಿಕೊಳ್ಳೋದನ್ನ ನೋಡ್ತೀರಾ..? ಯಾವ ಎಐಗೂ ಸಾಟಿ ಇಲ್ಲ ಅಂಥಹ ಒಂದು ಪ್ರದರ್ಶನವನ್ನ ಒಂದು ತಂಡ ಕೊಟ್ಟಿದೆ.. ಜೊತೆಗೆ ಒಂದು ಒಳ್ಳೆ ಉದ್ದೇಶ ಕೂಡ ಅಲ್ಲಿದೆ. ಗಿನ್ನಿಸ್ ರೆಕಾರ್ಡ್ ಮಾಡೋಕೆ  ಜನ ಏನೇನೋ ಮಾಡ್ತಾರೆ. ಇಲ್ಲೋಂದಿಷ್ಟು ಜನ್ರು ಸಹ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ. ಚೂರ್ ಮಿಸ್ ಆದ್ರೆ, ತಲೆ ಪೀಸ್ ಪೀಸ್ ಆಗುತ್ತೆ. ಇನ್ನೊಂದು ಕಡೆ ಉಸಿರು ನಿಂತೇ ಹೋಗುತ್ತೆ.. ಮತ್ತೊಬ್ಬ ಮಾಡಿರೋ ಸ್ಟಂಟ್ನಲ್ಲಿ ಅದೃಷ್ಟ ಕೆಟ್ರೆ ಆತ ಬದುಕಿ ಉಳಿಯೋದಕ್ಕಂತೂ ಚಾನ್ಸೇ ಇಲ್ಲ. ಕಾರ್ ಓಡ್ಸೋದು ಏನು..ಬಹಳ ಈಜಿ ಅಲ್ವಾ..? ಆದ್ರೆ, ಕಾರ್ ಓಡ್ಸೋದ್ರಲ್ಲೆ ಗಿನ್ನಿಸ್ ರೆಕಾರ್ಡ್ ಮಾಡೋದು ಸಾಮಾನ್ಯ ಜನರಿಗೆ ಆಗೋ ಮಾತಾ..?

ಹೀಗೆ, ಸಾಹಸಿಗರಿಂದ ಸೃಷ್ಟಿಯಾಗಿರೋ ಇನ್ನೊಂದಿಷ್ಟು ಗಿನ್ನಿಸ್ ರೆಕಾರ್ಡ್ಗಳನ್ನ ನಿಮಗೆ ತೋರಿಸ್ತೀವಿ. ನೀವು ಏನೇನೆಲ್ಲ ಗಿನ್ನಿಸ್ ದಾಖಲೆಗಳನ್ನು ನೋಡಿದ್ದೀರಾ. ಆದ್ರೆ ಫಾಸ್ಟೆಸ್ಟ್ ಕಾರ್ ವ್ಹೀಲ್ ಚೈಂಜ್ ದಾಖಲೆಯನ್ನು ನೋಡಿದ್ದೀರಾ? ಬನ್ನಿ ಆ ವ್ಯಕ್ತಿ ಅದೆಷ್ಟು ಬೇಗ ಕಾರಿನ ಚಕ್ರವನ್ನು ಬದಲಾಯಿಸ್ತಾನೆ ಅನ್ನೋದನ್ನು ತೋರಸ್ತೇವೆ. ಯೆಸ್, ಈ ರೀತಿಯ ಮೈ ನವಿರೇಳಿಸುವ ಗಿನ್ನಸ್ ದಾಖಳೆಗಳನ್ನು ಇನ್ನೊಂದಿಷ್ಟು ನೋಡೋಣ. ಇಲ್ಲೊಬ್ಬ ಮನುಷ್ಯ ತನ್ನ ಹಲ್ಲುಗಳು ಎಷ್ಟು ಗಟ್ಟಿ ಎಂದು ತೋರಿಸಲು ಗಿನ್ನಿಸ್ ದಾಖಲೆಯನ್ನೇ ಮಾಡಿದ್ದಾನೆ. ಆ ಮನುಷ್ಯ 60 ಸೆಕೆಂಡ್ಗಳಲ್ಲಿ ಅದೆಷ್ಟು ಟಿನ್ ಬಾಟಲ್ಗಳನ್ನು ಹಲ್ಲಿನಿಂದ ಕಚ್ಚಿ ಓಪನ್ ಮಾಡಿದ್ದಾನೆ ಗೊತ್ತಾ? ಇಲ್ಲಿ ತೋರಸ್ತೇವೆ ನೋಡಿ. ಯೆಸ್, ನೋಡಿದ್ರಿಲ್ಲಾ ಜಗತ್ತಿನಲ್ಲಿರುವ ಜನ ಗಿನ್ನಸ್ ದಾಖಲೆಗಾಗಿ ಏನೆಲ್ಲ ಸಾಹಸಗಳನ್ನು ಮಾಡಿದ್ದಾರೆ ಅನ್ನೋದನ್ನು. ಈ ತರದ ಭಯಾನಕ ಗಿನ್ನಿಸ್ ದಾಖಲೆಗಳನ್ನು ಹೊತ್ತು ಮತ್ತೆ ನಾಳೆ ಬರುತ್ತೇವೆ.