ಉತ್ತರ ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಸುನಾಮಿ,ಹೋದಲ್ಲಿ ಬಂದಲ್ಲೆಲ್ಲ ಹೆಬ್ಬುಲಿಗೆ ಸಿಕ್ತಿದೆ ಅದ್ಧೂರಿ ಸ್ವಾಗತ!

Apr 29, 2023, 12:57 PM IST

 ಉತ್ತರ ಕರ್ನಾಟಕದಲ್ಲಿ ಹೆಬ್ಬುಲಿ ಕಿಚ್ಚನ ಘರ್ಜನೆ ಜೋರಾಗಿತ್ತು.  ಬಿಜೆಪಿಗೆ ಸೆಡ್ಡು ಹೊಡೆದಿರುವ ಜಗದೀಶ್ ಶೆಟ್ಟರ್ ಕ್ಷೇತ್ರವಾದ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಅಭಿನಯ ಚಕ್ರವರ್ತಿ ಪ್ರಚಾರ ಮಾಡಿದರು. ಇನ್ನು ಸುದೀಪ್ ಹುಬ್ಬಳಿಗೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಸಾಗರವೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಸುದೀಪ್ ನೋಡಲು  ಮುಗಿ ಬಿದ್ದಿದ್ದರು. ಕಿಚ್ಚನಿಗೂ ಹುಬ್ಬಳ್ಳಿ ಮಂದಿಗೂ ವಿಶೇಷವಾದ ಸಂಬಂಧ ಇದೆ. ಕಿಚ್ಚನಿಗೆ ಉತ್ತರ ಕರ್ನಾಟಕದಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಇನ್ನು ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸುದೀಪ್ ನೆಚ್ಚಿನ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.