ರಿವೀಲ್ ಆಯ್ತು ಪುಷ್ಪನ ಅಡ್ಡದಲ್ಲಿ ಸೊಂಟ ಬಳುಕಿಸೋ ಚೆಲುವೆ ಯಾರು ಅನ್ನೋದು!

Oct 24, 2024, 4:50 PM IST

ಅಲ್ಲು ಅರ್ಜುನ್ ಪುಷ್ಪ- ದಿ ರೈಸ್ ಮೈವಿಯಲ್ಲಿ ಸಮಂತಾ ಹೆಜ್ಜೆ ಹಾಕಿದ್ದ ಹೂ ಅಂತಿಯಾ ಮಾವಾ.. ಸಾಂಗ್ ಅದ್ಯಾಪರಿ ಹಿಟ್ ಆಗಿತ್ತು ಅನ್ನೋದು ಗೊತ್ತೇ ಇದೆ. ಇದೀಗ ಪುಷ್ಪ-2ನಲ್ಲೂ ಅಂಥದ್ದೇ ಸ್ಪೆಷಲ್ ನಂಬರ್ ಸಾಂಗ್ ಇದ್ದು, ಅದಕ್ಕೆ ಮೈ ಬಳುಕಿಸೋ ಚೆಲುವೆ ಯಾರು ಅನ್ನೋದು ಮಾತ್ರ ಗುಟ್ಟಾಗೇ ಉಳಿದಿತ್ತು. ಇದೀಗ ಪುಷ್ಪನ ಅಡ್ಡದಲ್ಲಿ ನರ್ತಿಸೋ ಚೆಲುವೆ ಯಾರು ಅನ್ನೋದು ರಿವೀಲ್ ಆಗಿದೆ. ಬಾಲಿವುಡ್ ಬೆಡಗಿ ಶ್ರದ್ದಾ ಕಪೂರ್​ ಪುಷ್ಪ-ದಿ ರೂಲ್​ನಲ್ಲಿ ಹೆಜ್ಜೆ ಹಾಕೋದು ಬಹುತೇಕ ಖಾತ್ರಿಯಾಗಿದೆ. ಇದಕ್ಕಾಗಿ ಮೈತ್ರಿ ಮೂವಿ ಮೇಕರ್ಸ್ ಶ್ರದ್ದಾಗೆ ಬಹುದೊಡ್ಡ ಸಂಭಾವನೆಯ ಆಫರ್ ಮಾಡಿದ್ದು, ಸದ್ಯದಲ್ಲೇ ಆಶಿಕಿ ಬ್ಯೂಟಿ ಪುಷ್ಪನ ಅಡ್ಡಕ್ಕೆ ಬರಲಿದ್ದಾಳಂತೆ.

ಹಾಲಿವುಡ್​ನಲ್ಲೇ ಸೆಟಲ್ ಆಗಿರೋ ಪ್ರಿಯಾಂಕಾ ಛೋಪ್ರಾ ಅಪರೂಪಕ್ಕೆ ಮುಂಬೈಗೆ ಬಂದಿದ್ದು, ಹೊಸತೊಂದು ಫೋಟೋಶೂಟ್ ಮೂಲಕ ಹಲ್ ಚಲ್ ಎಬ್ಬಿಸಿದ್ದಾರೆ. ಲೈಟ್ ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ. ಪಿಗ್ಗಿಯ ನಯಾ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ದರ್ಶನ್ ನಟನೆಯ ಮೆಜೆಸ್ಟಿಕ್ ಸಿನಿಮಾ ಅಂದಿನ ಮೆಜೆಸ್ಟಿಕ್ ಹೇಗಿತ್ತು ಅನ್ನೋದನ್ನ ತೆರೆ ಮೇಲೆ ತಂದಿತ್ತು. ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ,  ಅಲ್ಲಿ ನಡೆಯುವ ದಂಧೆಗಳು, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನ  ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಮೂಲಕ ಹೇಳ್ತಾ ಇದೆ ಮೆಜೆಸ್ಟಿಕ್ -2 ಸಿನಿಮಾ. ರಾಮು ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದು ಯುವನಟ ಭರತ್ ನಾಯಕನಾಗಿ ಮಿಂಚಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಸ್ಪೆಷಲ್ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಅಗಿದ್ದು ಡಿಸೆಂಬರ್​ನಲ್ಲಿ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.