Dec 7, 2022, 1:15 PM IST
ಸ್ಯಾಂಡಲ್ವುಡ್‌ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್‌ಗೆ ಯಾರೇ ಎದುರಾಗ್ಲಿ, ಅವರನ್ನ ನೋಡಿದ ತಕ್ಷಣ ಶಿವಣ್ಣ ಅಂತಲೇ ಕರೀತಾರೆ. ಅಭಿಮಾನಿಗಳು, ಚಿತ್ರರಂಗದ ಮಂದಿ, ರಾಜಕೀಯ ನಾಯಕರು, ಅಷ್ಟೆ ಯಾಕೆ ವಯಸ್ಸಲ್ಲಿ ದೊಡ್ಡವರಾಗಿದ್ರು ಕೂಡ ಶಿವರಾಜ್ ಕುಮಾರ್ ಸಿಕ್ರೆ ಶಿವಣ್ಣ ಅಂತಲೇ ಮಾತಾಡಿಸ್ತಾರೆ. ಇದೀಗ ನಮ್ ಸೆಂಚುರಿ ಸ್ಟಾರ್ ಶಿರವಾಜ್ ಕುಮಾರ್ ಪಕ್ಕದ ಕಾಲಿವುಡ್ನ ಕೊಲವೆರಿ ಬಾಯ್ ಧನುಷ್‌ಗೆ ದೊಡ್ಡಣ್ಣನಾಗಿದ್ದಾರೆ. ತಮಿಳು ನಟ ಧನುಷ್‌ಗೆ ಶಿವಣ್ಣ ಈಗ ದೊಡ್ಡಣ್ಣ. ಅಷ್ಟಕ್ಕು ಈಗ್ಯಾಕೆ ಇವರಿಬ್ಬರ ಅಣ್ಣ ತಮ್ಮಂದಿರ ಸಂಬಂಧ ಹುಟ್ಟಿಕೊಳ್ತು ಅಂತೀರಾ.? ಅದಕ್ಕೆ ಕಾರಣ ಧನುಷ್ರ ಕ್ಯಾಪ್ಟನ್ ಮಿಲ್ಲರ್ ಸಿನಿಮಾ. ಕಾಲಿವುಡ್ ಸ್ಟಾರ್ ಧನುಷ್ ಸ್ವತಂತ್ರ ಪೂರ್ವದ ಕತೆಯ ಕ್ಯಾಪ್ಟನ್ ಮಿಲ್ಲರ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಈ ಮೂವಿಯಲ್ಲಿ ಧನುಷ್ಗೆ ದೊಡ್ಡಣ್ಣನ ರೋಲ್ನಲ್ಲಿ ಸೆಂಚುರಿ ಸ್ಟಾರ್ ನಟಿಸಲಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 125ನೇ ಸಿನಿಮಾ ವೇದ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಮತ್ತೊಂದೆಡೆ ಘೋಸ್ಟ್, ಕರಟಕ ದಮನಕ, ಅಶ್ವತ್ಥಾಮ, ಸತ್ಯಮಂಗಳ ಸಿನಿಮಾಗಳ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಆದ್ರೆ ಇದೆಲ್ಲರದ ಮಧ್ಯೆ ಸೂಪರ್ ಸ್ಟಾರ್ ರಜನಿಕಾಂತ್ ರ ಜೈಲರ್ ಸಿನಿಮಾ ಅಡ್ಡಕ್ಕೂ ಶಿವಣ್ಣ ಎಂಟ್ರಿಯಾಗಿದೆ. ತಮಿಳು ಚಿತ್ರರಂಗದ ಮಾವ ಅಳಿಯ ರಜನಿಕಾಂತ್ ಹಾಗು ಧನುಷ್ ಇಬ್ಬರ ಸಿನಿಮಾದಲ್ಲೂ ಶಿವರಾಜ್ ಕುಮಾರ್ ನಟಿಸುತ್ತಿರೋದು ವಿಶೇಷ. ಧನುಷ್ ನಟನೆ ಶಿವರಾಜ್ ಕುಮಾರ್ ತುಂಬಾನೆ ಇಷ್ಟ ಅಂತ ಶಿವಣ್ಣ ಆಗಾಗ ಹೇಳ್ತಾನೆ ಇರ್ತಾರೆ. ಕ್ಯಾಪ್ಟನ್‌ಮಿಲ್ಲರ್ ಸಿನಿಮಾದ ನಿರ್ದೇಶಕ ಅರುಣ್ ಮಾದೇಶ್ವರನ್ ಬೆಂಗಳೂರಿಗೆ ಬಂದು ಶಿವಣ್ಣನಿಗೆ ಕಥೆ ಒಪ್ಪಿಸಿದ್ರು. ಕ್ಯಾಪ್ಟನ್ ಮಿಲ್ಲರ್ ಸ್ಟೋರಿ ತುಂಬಾನೆ ಅದ್ಧೂರಿಯಾಗಿದ್ದು, ಶಿವಣ್ಣನ ರೋಲ್ ಕೂಡ ಸಿಕ್ಕಪಟ್ಟೆ ಫೈರಿಂಗ್ ಆಗಿದೆಯಂತೆ. ಹೀಗಾಗೆ ಈ ಸಿನಿಮಾ ಮಾಡೋಕೆ ಶಿವಣ್ಣ ಯೆಸ್ ಎಂದಿದ್ದು, ಧನುಷ್‌ಗೆ ದೊಡ್ಡಣ್ಣ ಆಗುತ್ತಿದ್ದಾರೆ ಶಿವಣ್ಣ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment