Apr 13, 2023, 8:42 PM IST
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅಂದ್ರೆ ಅವರ ಹೈಫೈ ಜೀವನದ ಕುರಿತು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅವರ ಮಗಳು ಸುಹಾನಾ ಖಾನ್ ಹಾಗೂ ಆರ್ಯನ್ ಖಾನ್ ಕೂಡಾ ಲಕ್ಷುರಿ ಜೀವನ ನಡೆಸುತ್ತಾರೆ. ಶಿಕ್ಷಣದಿಂದ ತೊಡಗಿ ಈಗ ಬ್ಯುಸಿನೆಸ್ ಕೂಡಾ ಶುರು ಮಾಡಿರುವ ಈ ಸ್ಟಾರ್ ಕಿಡ್ಸ್ ಸಿಕ್ಕಾಪಟ್ಟೆ ರಿಚ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಹಾನಾ ಖಾನ್ ಐಪಿಎಲ್ ಶುರುವಾದಾಗಿನಿಂದ ತಂದೆಯೊಂದಿಗೆ ಗ್ರೌಂಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಹಾನಾ ಇತ್ತೀಚೆಗೆ ಗ್ರೌಂಡ್ನಲ್ಲಿ ಕಾಣಿಸಿಕೊಂಡರು. ಆಗ ಎಲ್ಲರ ಗಮನ ಹೋಗಿದ್ದರು ಅವರ ಕೈಯಲ್ಲಿದ್ದ ಹ್ಯಾಂಡ್ಬ್ಯಾಗ್ ಕಡೆಗೆ. ಅನಿಮಲ್ ಪ್ರಿಂಟ್ ಇದ್ದಂತಹ ಬ್ಯಾಗ್ ಸಿಕ್ಕಾಪಟ್ಟೆ ದುಬಾರಿ. ಇದು ಡಿಸೈನರ್ ಬ್ಯಾಗ್. ಲಕ್ಷುರಿಯಾದಂತಹ ಈ ಟೋಟ್ ಬ್ಯಾಗ್ ಬೆಲೆ ಸುಮಾರು 3 ಲಕ್ಷ ಇದೆ. ಇದನ್ನು ನೋಡಿದ ನೆಟ್ಟಿಗರು ಏನಮ್ಮಾ ಅಪ್ಪ ದುಡಿದದ್ದೆಲ್ಲಾ ಹ್ಯಾಂಡ್ಬ್ಯಾಗ್ ಖರೀದಿಸಿಯೇ ಮುಗಿಸ್ತೀಯಾ ಎಂದು ಟ್ರೋಲ್ ಮಾಡುತ್ತಿದ್ದಾರೆ.