ಸೋಲಿನ ಸುಳಿಯಲ್ಲಿ ಕಿಂಗ್ ಖಾನ್ ಶಾರುಖ್: ಫಸ್ಟ್ ಡೇ ಡಂಕಿ ಕಲೆಕ್ಷನ್ ಬರೋಬ್ಬರಿ 30 ಕೋಟಿ!

Dec 23, 2023, 1:01 PM IST

ಕಿಂಗ್ ಖಾನ್ ಶಾರುಖ್ ಸತತ ಸೋಲಿನಿಂದ ಬೆಂದು ಹೋಗಿದ್ದ ಹಿಂದಿ ಸಿನಿ ಜಗತ್ತಿಗೆ ಶಕ್ತಿಯಾಗಿ ನಿಂತಿದ್ರು. ಶಾರುಖ್ ನಟನೆಯ ಜವಾನ್ ಹಾಗು ಪಠಾಣ್ ಸಿನಿಮಾಗಳು ಸೂಪರ್ ಹಿಟ್ ಆಗಿ ಹಿಂದಿ ಸಿನಿಮಾ ಜಗತ್ತಿಗೆ ಇನ್ನೂ ಜೀವ ಇದೆ ಅಂತ ಹೇಳಿದ್ರು. ಆದ್ರೆ ಈಗ ಮತ್ತೆ ಶಾರುಖ್ಗೆ ಸೋಲಿನ ರುಚಿ ಸಿಕ್ಕಿದೆ. ಶಾರುಖ್ ಖಾನ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಡಂಕಿ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಡುಮ್ಕಿ ಹೊಡೆದಿದೆ. 2023ರ ಶಾರುಖ್ ಖಾನ್ ಸಿನಿ ಖರಿಯರ್ನ ಬೆಸ್ಟ್ ಈಯರ್. ಯಾಕಂದ್ರೆ ಶಾರುಖ್ ಜವಾನ್ ಸಿನಿಮಾದಿಂದ 1,148.32 ಕೋಟಿ ಕಲೆಕ್ಷನ್ ಮಾಡಿದ್ರು. ಪಠಾಣ್ ಸಿನಿಮಾದಿಂದ 1,050.30 ಕೋಟಿ ಗಳಿಸಿದ್ರು. ಈ ಬಿಗ್ ಹಿಟ್ನಿಂದ ಡಂಕಿ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದ್ರೆ ಆ ನಿರೀಕ್ಷೆ ನಿರಾಸೆಯಾಗಿದೆ. ಡಂಕಿ ಮೊದಲ ದಿನ ಕಲೆಕ್ಷನ್ ಫುಲ್ ಡಲ್ ಆಗಿದೆ. 

ರಾಜ್ಕುಮಾರ್ ಹಿರಾನಿ ಬಾಲಿವುಡ್ನ ದಿಗ್ಗಜ ಡೈರೆಕ್ಟರ್. ಮುನ್ನಭಾಯಿ ಎಂಬಿಬಿಎಸ್, 3 ಈಡಿಯೆಟ್ಸ್, ಪಿಕೆ. ಸಂಜು ಹೀಗೆ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಆದ್ರೆ ರಾಜ್ ಕುಮಾರ್ ಹಿರಾನಿಯ ಡಂಕಿ ಸಿನಿಮಾ ಕಲೆಕ್ಷನ್ನಲ್ಲಿ ಡಮಾರ್ ಆಗಿದೆ. ಈ ಸಿನಿಮಾ ಫಸ್ಟ್ ಡೇ ಜೆಸ್ಟ್ 30 ಕೋಟಿಯಷ್ಟೇ ಕಲೆಕ್ಷನ್ ಮಾಡಿದೆ. ಶಾರುಖ್ರ ಜವಾನ್ ಸಿನಿಮಾ ಫಸ್ಟ್ ಡೇ 75 ಕೋಟಿ ಕಲೆಕ್ಷನ್ ಮಾಡಿತ್ತು. ಪಠಾಣ್ ಫಸ್ಟ್ ಡೇ ಕಲೆಕ್ಷನ್ 57 ಕೋಟಿ ಗಳಿಸಿತ್ತು. ಆದ್ರೆ ಡಂಕಿ ಮಾತ್ರ ಅಟ್ಟರ್ ಪ್ಲಾಫ್ ಆಗಿದೆ. ಪ್ರಭಾಸ್ ನಟನೆಯ ಸಲಾರ್ ಜತೆ ಡಂಗಿ ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಆಗಿತ್ತು. ಆದ್ರೆ ಆ ಎಕ್ಕಾಚಾರ ಬುಡ ಮೇಲಾಗಿದೆ. ಸಲಾರ್ ಫಸ್ಟ್ ಡೇ ಕಲೆಕ್ಷನ್ 50 ಕೋಟಿ ಅಂತ ಅಂದಾಚಿಸಲಾಗಿದ್ದು, ಡಂಕಿ ಡಮಾರ್ ಸಲಾರ್ ಸೂಪರ್ ಅನ್ನೋ ಹಾಗಾಗಿದೆ.