Oct 30, 2022, 4:51 PM IST
ಇತ್ತೀಚೆಗಷ್ಟೆ ಕಾಂತಾರ ಸಿನಿಮಾ ನೋಡಿದ್ದ ರಜನಿಕಾಂತ್, ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಉತ್ತಮ ಸಿನಿಮಾ ನೀಡಿದ್ದಾರೆ. ರಿಷಬ್ ನಟನೆ, ನಿರ್ದೆಶನ, ಬರವಣಿಗೆಗೆ ಹ್ಯಾಟ್ಸಪ್. ಮೈನವಿರೇಳಿಸಿರುವ ಅನುಭವ ನೀಡಿದೆ. ತಂಡಕ್ಕೆ ಶುಭಾಶಯಗಳು’ ಎಂದಿದ್ದರು. ಇದೀಗ ರಿಷಬ್ ಶೆಟ್ಟಿ ಚೆನ್ನೈನಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೀವು ಒಂದ್ ಸಲ ಹೊಗಳಿದ್ರೆ, ನೂರು ಸಲ ಹೊಗಳ್ದಂಗೆ ನಮಗೆ. ಧನ್ಯವಾದಗಳು ರಜನಿಕಾಂತ್ ಸರ್. ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು ರಿಷಬ್ ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ.