Apr 12, 2023, 4:35 PM IST
ವಾಜಿ ಸುರತ್ಕಲ್ ಸಿನಿಮಾದ ಮುಂದುವರೆದ ಭಾಗ ʼಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿʼ ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ .‘ಶಿವಾಜಿ ಸುರತ್ಕಲ್ 2’ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೊದಲ ಸಿನಿಮಾದಲ್ಲಿದ್ದಂತೆ ಈ ಚಾಪ್ಟರ್2ನಲ್ಲೂ ಶಿವಾಜಿಯ ಖಾಸಗಿ ಬದುಕಿನ ಒಂದು ನೋಟ ಇದೆ. ಮತ್ತೊಂದು ಕಡೆ ಸರಣಿ ಹಂತಕನ ಜಾಡು ಹಿಡಿಯೋ ಸಾಹಸದ ಕತೆ ಇದೆ. ಶಿವಾಜಿ ಸೂರತ್ಕಲ್ ಚಾಪ್ಟರ್ ನಲ್ಲಿ ಮಾಯಾವಿ ಎಂಟ್ರಿಯೂ ಆಗಿದೆ. ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಬೇಧಿಸುತ್ತಾನೆ ಅನ್ನೋದೆ ಶಿವಾಜಿ ಸೂರತ್ಕಲ್ ಚಾಪ್ಟರ್2 ಇಂಟ್ರೆಸ್ಟಿಂಗ್ ಸ್ಟೋರಿ.