Apr 16, 2023, 5:07 PM IST
ಸ್ಯಾಂಡಲ್‌ವುಡ್ ಸುಂದರಾಂಗ ಜಾಣ ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಈ ಭಾರಿ ರಮೇಶ್ ಅರವಿಂದ್ ಸರಣಿ ಕೊಲೆಗಳ ಭೇದಿಸಿದ್ದಾರೆ. ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಪಾರ್ಟ್2 ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಕ್ರೈಂ ಕಥೆಯನ್ನ ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದಾರೆ.. ಶಿವಾಜಿ ಸೂರತ್ಕಲ್‌ನಲ್ಲಿ ರಣಗಿರಿ ರಹಸ್ಯ ಭೇದಿಸಿ ಮೆಚ್ಚುಗೆ ಪಡೆದಿದ್ದ ರಮೇಶ್ ಅರವಿಂದ್ ಈ ಭಾರಿ ದಿ ಕೇಸ್ ಆಫ್ ಮಾಯಾವಿಯ ಸರಣಿ ಹಂತಕನನ್ನ ಹಿಡಿದು ಗೆದ್ದಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸೂರತ್ಕಲ್ ಪಾರ್ಟ್2 ಸಿನಿಮಾ ಕೂಡ ಸಕ್ಸಸ್ ಟ್ರ್ಯಾಕ್‌ಗೆ ಬಂದಿದ್ದು, ಕ್ಷಣ ಕ್ಷಣಕ್ಕು ಟ್ವಿಸ್ಟ್, ರೋಚಕ ಮಾಯಾವಿಯ ಥ್ರಿಲ್ಲಿಂಗ್ ಅನುಭವದಲ್ಲಿ ಪ್ರೇಕ್ಷಕರು ಮಿಂದೇಳುತ್ತಿದ್ದಾರೆ.