ಆದಿಲ್ ಯೂಸ್ ಮಾಡಿ ಬಿಸಾಕ್ತಾನೆ; ಮೈಸೂರು ಬಾಯ್‌ಫ್ರೆಂಡ್ ಬಗ್ಗೆ ಎಕ್ಸ್ ಪತಿ ಹೇಳಿದ್ದಕ್ಕೆ ರಾಖಿ ಕಣ್ಣೀರು

Jul 24, 2022, 4:37 PM IST

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಪ್ರೀತಿಯಲ್ಲಿರುವುದು ಗೊತ್ತಾಗಿದೆ. ಆದಿಲ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ ಬಳಿಕ ಎಕ್ಸ್ ಪತಿ ರಿತೇಶ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮತ್ತೆ ಎಕ್ಸ್ ಪತಿ ಹೇಳಿದ್ದನ್ನು ನೆನೆದು ಕಣ್ಣೀರಾಕಿದ್ದಾರೆ. ಆದಿಲ್ ಯೂಸ್ ಮಾಡಿ ಬಿಸಾಕ್ತಾನೆ ಎಂದು ರಿತೀಶ್ ಹೇಳಿದ್ದನ್ನು ನೆನೆದು ಗಳಗಳನೆ ಅತ್ತಿದ್ದಾರೆ. ಸಾಯಲು ಇಷ್ಟ ಇಲ್ಲ, ನಾನು ಬದುಕಬೇಕು ಎಂದ ಹೇಳಿದ್ದಾರೆ. ಪಕ್ಕದಲ್ಲೇ ಇದ್ದ ಆದಿಲ್ ರಾಖಿಯನ್ನು ಸಮಾಧಾನ ಮಾಡಿದ್ದಾರೆ. ಸಾಯುವ ಮಾತ್ಯಾಕೆ ಎಂದು ಹೇಳಿದ್ದಾರೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಬಿಟ್ಟುಹೋಗಬೇಡ ಎಂದು ಆದಿಲ್ ತಬ್ಬಿ ಭಾವುಕರಾಗಿದ್ದಾರೆ.