Jun 11, 2023, 3:02 PM IST
ಫಸ್ಟ್ Rank ರಾಜು ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ 'ರಾಜು ಜೇಮ್ಸ್ ಬಾಂಡ್' ಸಿನಿಮಾ ರಿಲೀಸ್’ಗೆ ಸಿದ್ಧವಾಗಿದೆ. ಸಿನಿಮಾದ "ಬೇಕಿತ್ತಾ ಬೇಕಿತ್ತಾ, ಈ ಲವ್ವು ಬೇಕಿತ್ತಾ.." ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಅಂತೋನಿ ದಾಸ್ ಹಾಡಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ದೀಪಕ್ ಮಧುವನಹಳ್ಳಿ. ನಿರ್ದೇಶನದ ಮೂರನೇ ಚಿತ್ರ ಇದಾಗಿದ್ದು, ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ರ್ನಿಮಾಣ ಮಾಡಿದ್ದಾರೆ. ಲಂಡನ್’ನಲ್ಲಿ 21 ದಿನಗಳ ಚಿತ್ರೀಕರಣವಾಗಿದ್ದು, ಆಗಷ್ಟ್’ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.