Oct 23, 2024, 4:34 PM IST
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಬಗ್ಗೆ ಸಿನಿಲೋಕದಲ್ಲಿ ಅದೆಷ್ಟು ಕ್ರೇಜ್ ಇದೆ ಅನ್ನೋದು ಗೊತ್ತೇ ಇದೆ. ಈ ಕ್ರೇಜ್ಗೆ ತಕ್ಕಂತೆ ಅದ್ದೂರಿಯಾಗಿ ರೆಡಿಯಾಗ್ತಾ ಇರೋ ಸಿನಿಮಾ ಡಿಸೆಂಬರ್ 6ಕ್ಕೆ ವರ್ಲ್ಡ್ ವೈಡ್ ತರೆಗೆ ಬರೋದಕ್ಕೆ ಸಜ್ಜಾಗಿದೆ. ಆದ್ರೆ ರಿಲೀಸ್ಗೂ ಮುನ್ನವೇ ಪುಷ್ಪ-2 ಅದ್ಯಾಪರಿಯ ಬ್ಯುಸಿನೆಸ್ ಮಾಡಿದೆ ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಫಿಕ್ಸ್. ಪುಷ್ಪ-2 ಪ್ರೀ ರಿಲೀಸ್ ಬ್ಯುಸಿನೆಸ್ ಕೇಳಿ ಇಡೀ ಇಂಡಿಯನ್ ಸಿನಿಇಂಡಸ್ಟ್ರಿಯೇ ದಂಗಾಗಿ ಹೋಗಿದೆ. 2021ರಲ್ಲಿ ಅಂಥಾ ದೊಡ್ಡ ನಿರೀಕ್ಷೆಗಳಿಲ್ಲದೇ ತೆರೆಗೆ ಬಂದ ಪುಷ್ಪ- ದಿ ರೈಸ್ ಪ್ಯಾನ್ ಇಂಡಿಯಾ ದೊಡ್ಡ ಕಮಾಲ್ ಮಾಡ್ತು. ಅಲ್ಲಿಂದ ಮುಂದೆ ಪುಷ್ಪ ಸೀಕ್ವೆಲ್ನ ದೊಡ್ಡ ಮಟ್ಟದಲ್ಲಿ ಮಾಡೋದಕ್ಕೆ ಟೀಮ್ ಪ್ಲಾನ್ ಮಾಡಿಕೊಳ್ತು.
ಅಂತೆಯೇ ನಿರ್ದೇಶಕ ಸುಕುಮಾರ್ ದೊಡ್ಡ ಕ್ಯಾನ್ವಾಸ್ನ ಕಥೆ ಹೆಣೆದು ದೊಡ್ಡ ಮಟ್ಟದಲ್ಲಿ ಸಿನಿಮಾ ರೆಡಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗಾಗಿ ಭರ್ತಿ 500 ಕೋಟಿ ಹೂಡಿಕೆ ಮಾಡಿದೆ. ಅಲ್ಲು ಅರ್ಜುನ್ ಈ ಪ್ರಾಜೆಕ್ಟ್ಗಾಗಿ ಬರೊಬ್ಬರಿ 3 ವರ್ಷ ಕಳೆದಿದ್ದಾರೆ. ಸೋ ಇಷ್ಟೆಲ್ಲಾ ಶ್ರಮದೊಂದಿಗೆ ರೆಡಿಯಾಗಿರೋ ಸಿನಿಮಾ, ಅಷ್ಟೇ ದೊಡ್ಡ ನಿರೀಕ್ಷೆ ಸೃಷ್ಟಿಯಾ ಮಾಡಿದೆ. ಆ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಆಗಿದೆ. ಹೌದು ಆಂಧ್ರ, ತೆಲಂಗಾಣ ಮತ್ತು ಉತ್ತರ ಭಾರತದಲ್ಲಿನ ಥಿಯೇಟ್ರಿಕಲ್ ರೈಟ್ಸ್ ಸೋಲ್ಡ್ ಔಟ್ ಆಗಿದ್ದು ಇದ್ರಿಂದ 375 ಕೋಟಿ ಬಂದ್ರೆ, ರೆಸ್ಟ್ ಆಫ್ ಇಂಡಿಯಾ ಥಿಯೇಟ್ರಿಕಲ್ ರೈಟ್ಸ್ನಿಂದ 100 ಕೋಟಿ ಬಂದಿದೆಯಂತೆ. ಇನ್ನೂ ವಿದೇಶದಲ್ಲಿನ ಥಿಯೇಟ್ರಿಕಲ್ ಬ್ಯುಸಿನೆಸ್ ಭರ್ತಿ 125 ಕೋಟಿ ಅಂತ ಹೇಳಲಾಗ್ತಾ ಇದೆ.
ಇನ್ನೂ ಪುಷ್ಪ- ದಿ ರೂಲ್ ಓಟಿಟಿ ರೈಟ್ಸ್ ಭರ್ತಿ 200 ಕೋಟಿಗೇ ಸೇಲ್ ಆಗಿರೋ ಸುದ್ದಿ ಈ ಹಿಂದೆಯೇ ಸದ್ದು ಮಾಡಿತ್ತು. ಇದೀಗ ಸ್ಯಾಟ್ಲೈಟ್ ರೈಟ್ಸ್ ಮತ್ತು ಇತರ ಹಕ್ಕುಗಳಿಂದ ಬಂದಿರೋ ಹಣ ಮತ್ತೂ ಇನ್ನೂರು ಕೋಟಿ ಅಂತ ಹೇಳಲಾಗ್ತಾ ಇದೆ. ಅಲ್ಲಿಗೆ ರಿಲೀಸ್ ಗೂ ಮೊದಲೇ ಪುಷ್ಪ-2 .. ಸಾವಿರ ಕೋಟಿ ಗಳಿಸಿದೆ. ಅಲ್ಲಿಗೆ ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿರೋ ಮೊಟ್ಟ ಮೊದಲ ಸಿನಿಮಾ ಇದು. ಈ ಲೆಕ್ಕದಲ್ಲಿ ಪುಷ್ಪ ಮೇಕರ್ಸ್ ಈಗಾಗ್ಲೇ ಬಂಡವಾಳಕ್ಕಿಂತ ಎರಡು ಪಟ್ಟು ಲಾಭ ಮಾಡಿಕೊಂಡಿದ್ದಾರಂತೆ. ಒಟ್ಟಾರೆ ಪುಷ್ಪ-2 ಲೆಕ್ಕಾಚಾರಗಳನ್ನ ಕೇಳಿ ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿ ದಂಗಾಗಿದೆ. ರಿಲೀಸ್ ಗೂ ಮುನ್ನವೇ ಇಷ್ಟೆಲ್ಲಾ ದಾಖಲೆ ಮಾಡಿರೋ ಸಿನಿಮಾ ರಿಲೀಸ್ ಬಳಿಕ ಅದೆಂಥಾ ಹವಾ ಕ್ರಿಯೇಟ್ ಮಾಡಬಹುದು ಅಂತ ಬಾಕ್ಸ್ ಆಫೀಸ್ ಪಂಡಿತರು ತಲೆಕೆಡಿಸಿಕೊಂಡಿದ್ದಾರೆ.