Jun 28, 2023, 12:26 PM IST
ಡಾರ್ಲಿಂಗ್ ಪ್ರಭಾಸ್ ಗೆ ಈಗ ಅಗ್ನಿ ಪರೀಕ್ಷೆಯಲ್ಲಿ ನಿಂತಿದ್ದಾರೆ. ಬಾಹುಬಲಿ ಬಂದ ಮೇಲೆ ಬಾಕ್ಸಾಫೀಸ್ ನಲ್ಲಿ ಬಲ ಕಳೆದುಕೊಂಡಿರುವ ಪ್ರಭಾಸ್ ಗೆ ಸಿಕ್ತಾ ಇರೋದು ಸೋಲಿನ ಕಿರೀಟ ಮಾತ್ರ. ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಗಲ್ಲಾಪೆಟ್ಟಿಗೆ ಯುದ್ಧದಲ್ಲಿ ಸೋತ ಮೇಲೆ ಪ್ರಭಾಸ್ ಉಸಿರಾಡೋಕೆ ಇರೋ ಒಂದೇ ಒಂದು ಅಸ್ತ್ರ ಅಂದರೆ ಅದು ಸಲಾರ್. ಸೋಲಿನಟ್ರ್ಯಾಕ್ ನಲ್ಲಿರುವ ಪ್ರಭಾಸ್ರನ ಮತ್ತೆ ಗೆಲುವಿನ ಹಳಿಗೆ ಕರೆ ತರುವ ಶಕ್ತಿ ಇರುವುದು ಏಕೈಕ ಡೈರೆಕ್ಟರ್ ಪ್ರಶಾಂತ್ ನೀಲ್ ಅಂತ ಎಲ್ಲ ಕಡೆ ಸುದ್ದಿಯಾಗ್ತಿದೆ. ಒಂದ್ ಕಡೆ ಸಕ್ಸಸ್ ಎನ್ನುವುದು ಪ್ರಭಾಸ್‌ಗೆ ಮರೀಚಿಕೆ ಆಗಿರುವ ಬೆನ್ನಲ್ಲೇ ಮತ್ತೊಂದ್ ಕಡೆ ಡಾರ್ಲಿಂಗ್ ಡಿಮ್ಯಾಂಡ್ ಮಾತ್ರ ಹೆಚ್ಚಾಗ್ತಾನೆ ಇದೆ