ಸಿಲ್ವರ್ ಜುಬಿಲಿ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ‘ಕಬ್ಜ’, 25 ದಿನ ಯಶಸ್ವಿ ಪ್ರದರ್ಶನ

Apr 16, 2023, 3:54 PM IST

ಉಪೇಂದ್ರ ಅಭಿನಯದ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾ ಬಿಡುಗಡೆಯಾಗಿ  25 ದಿನ ಪೂರೈಸಿದ್ದು, ಆರ್ ಚಂದ್ರು  ನಿರ್ದೇಶಕ  ತಮ್ಮ ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದರು. ‘ಕಬ್ಜ ಸಿನಿಮಾಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ದಾಖಲೆಯ ಕಲೆಕ್ಷನ್ ಗಳಿಸಿದೆ. ಉಪೇಂದ್ರ ಅವರಿಗೆ ಋಣಿಯಾಗಿದ್ದೇನೆ ಮತ್ತು ಈ ಕ್ರೆಡಿಟ್ ಇಡೀ ತಂಡಕ್ಕೆ ಸಲ್ಲಬೇಕು ಎಂದು ಚಂದ್ರು ಹೇಳಿದ್ದಾರೆ.ಇದೀಗ ಕಬ್ಜ 2 ಬಗ್ಗೆ ನಿರ್ದೇಶಕರಾದ ಆರ್. ಚಂದ್ರು  ಅವರು ಅಧಿಕೃತ ಘೋಷಣೆ ಹೊರಡಿಸಿದ್ದು, ಕಬ್ಜ ಸೀಕ್ವೆಲ್ ಅವರು ಮಾಹಿತಿ ನೀಡಿದ್ದಾರೆ.