Apr 17, 2023, 5:11 PM IST
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕೆಂಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ ಫೋಟೋ ಶೇರ್ ಮಾಡಿದ್ದಾರೆ . ಬ್ರೈಡಲ್ ರೆಡ್ ಕಲರ್ ಸೀರೆ ಜತೆ ಸ್ಲೀವ್ಲೆಸ್ ಬ್ಲೌಸ್ ಉಟ್ಟು ಆಭರಣ ಧರಿಸಿ ದೊಡ್ಡ ಗಾತ್ರದಲ್ಲಿ ಕುಂಕುಮ ಇಟ್ಟಿದ್ದರು. ಹಾಗೇ ಬ್ರೈಟ್ ರೆಡ್ ಲಿಪ್ಸ್ಟಿಕ್ ಹಚ್ಚಿದ್ದಾರೆ.ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿವೇದಿತಾ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದು, ನಿವೇದಿತಾ ರಾ ರಾ ನಾಗವಲ್ಲಿ ಅಂತ ಕರೆದು ನಾಗವಲ್ಲಿ ಪಟ್ಟ ಕೊಟ್ಟು ಟ್ರೋಲ್ ಮಾಡುತ್ತಿದ್ದಾರೆ.