Mar 16, 2023, 9:59 PM IST
ನಿರ್ದೇಶಕ ಎಸ್.ಎಸ್.ರಾಜಮೌಳಿ ಸಿನಿಮಾ ಮಾಂತ್ರಿಕ ಆದ್ರೆ ಈಗ ಸಂಗೀತ ಲೋಕದ ಮಾಂತ್ರಿಕಾ ಎಂ.ಎಂ.ಕೀರವಾಣಿ ಆಗಿದ್ದಾರೆ. ಕೀರವಾಣಿ ಹೆಸರು ಈಗ ವರ್ಲ್ಡ್ ಸಿನಿಮಾ ಭೂಪಟದಲ್ಲಿ ಅಚ್ಚೊತ್ತಿದೆ. ಅದಕ್ಕೆ ಕಾರಣ ಆಗಿದ್ದು, ಕೀರವಾಣಿಯ ಸುಮಧುರ ವಾಣಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು. ಈ ಹಾಡಿಗೆ ಆಸ್ಕರ್ ಬಂದಿದ್ದೇ ಬಂದಿದ್ದು, ದಕ್ಷಿಣ ಭಾರತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ವರ್ಲ್ಡ್ ಫೇಮಸ್ ಆಗೋದ್ರು. ಜಗದಗಲ ಸುದ್ದಿಯಲ್ಲಿರೋ ಎಂ.ಎಂ ಕೀರವಾಣಿ ಕನ್ನಡ ಚಿತ್ರರಂಗದ ಜೊತೆಗೂ ನಂಟು ಹೊಂದಿದ್ದಾರೆ.
ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಿಗೂ ಮ್ಯೂಸಿಕ್ ಮಾಡಿದ್ದಾರೆ. ಕನ್ನಡದಲ್ಲಿ ಕೀರವಾಣಿ ಮೊದಲು ಮ್ಯೂಸಿಕ್ ಮಾಡಿದ್ದು ಅರ್ಜುನ್ ಸರ್ಜಾ, ಶ್ರುತಿ, ನಟಿಸಿದ್ದ ‘ಅಳಿಮಯ್ಯ’ ಚಿತ್ರಕ್ಕೆ. ಆ ನಂತರ ಸ್ವಾತಿ, ಭೈರವ, ಕರ್ನಾಟಕ ಸುಪುತ್ರ, ಅಪ್ಪಾಜಿ, ದೀಪಾವಳಿ, ಸುಂದರಕಾಂಡ, ಅಮ್ಮ, ಜಮೀನ್ದಾರು, ಸಿನಿಮಾಗಳಿಗೆ ಟ್ಯೂನ್ ಹಾಕಿದ್ರು. ತೆಲುಗಿನಿಂದ ಕನ್ನಡಕ್ಕೆ ರಿಮೇಕ್ ಆದ ಮರ್ಯಾದೆ ರಾಮಣ್ಣ, ವೀರ ಮದಕರಿ ಹಾಡುಗಳಿಗೂ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಎಂ ಎಂ ಕೀರವಾಣಿ ಕನ್ನಡಕ್ಕೂ ಮರೆಯಲಾಗದ ಹಾಡು ಕೊಟ್ಟಿದ್ದಾರೆ.
ಅಂತಹ ಹಾಡಿನಲ್ಲಿ ಡಾ ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಸಿನಿಮಾದ ಏನೆ ಕನ್ನಡತಿ ಹಾಡು ಇದೆ. ಎಸ್. ಬಿ ಬಾಲಸುಬ್ರಹ್ಮಣ್ಯಂ ಈ ಹಾಡು ಹಾಡಿದ್ರು. ಅಷ್ಟೆ ಅಲ್ಲ ವಿಷ್ಣುವರ್ಧನ್ರ 'ಕರ್ನಾಟಕ ಸುಪುತ್ರ' ಚಿತ್ರಕ್ಕೂ ಕೀರವಾಣಿ ಮ್ಯೂಸಿಕ್ ಮಾಡಿದ್ರು. ವಿಶೇಷ ಅಂದ್ರೆ ಈ ಸಿನಿಮಾದ ಒಂದು ಹಾಡನ್ನು ಡಾ. ರಾಜ್‌ಕುಮಾರ್‌ರಿಂದ ಹಾಡಿಸಿದ್ರು. ಕೀರವಾಣಿ ಟ್ಯಾಲೆಂಟ್ ಬರೀ ಮ್ಯೂಸಕ್ ಹೆಣೆಯೋದ್ರಲ್ಲಿ ಮಾತ್ರ ಇಲ್ಲ. ಗೀತ ರಚನೆ, ಗಾಯನದಲ್ಲೂ ಚತುರ. ಹೀಗಾಗಿ ಕನ್ನಡದ ನಾಧಬ್ರಹ್ಮ ಹಂಸಲೇಖ ಅವರು ಕಲ್ಲರಳಿ ಹೂವಾಗಿ ಚಿತ್ರದ ದಯವಿಲ್ಲದ ಧರ್ಮ ಆವುದಯ್ಯ ಹಾಡನ್ನ ಕೀರವಾಣಿ ಅವರಿಂದ ಹಾಡಿಸಿದ್ರು. ಹೀಗೆ ಕನ್ನಡ ಚಿತ್ರರಂಗಕ್ಕೂ ಕೀರವಾಣಿ ಮ್ಯೂಸಿಕ್ ಗೀಚಿದ್ದು, ಈಗ ಆರ್‌ಆರ್‌ಆರ್‌ನಿಂದ ಆಸ್ಕರ್ ಪಡೆದಿದ್ದಾರೆ. ಇವರ ಈ ಸಾಧನೆಯ ಶಿಕರಕ್ಕೆ ಇಡೀ ಭಾರತೀಯ ಚಿತ್ರರಂಗ ಸೆಲ್ಯೂಟ್ ಹೊಡೆಯುತ್ತಿದೆ.