Jan 5, 2025, 8:44 PM IST
ಯುರೋಪಿಯನ್ ಚೆಲುವೆ ಆಮಿ ಜಾಕ್ಸನ್ ಇಂಡಿಯನ್ ಸಿನಿ ದುನಿಯಾದಲ್ಲಿ ತನ್ನ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದ ಮೇಲೂ ಆಮಿ ಒಂಚೂರು ಬದಲಾಗಿಲ್ಲ. ಈಕೆಯ ಏಳು ಮಲ್ಲಿಗೆ ತೂಕದಲ್ಲಿ ಒಂದು ಗ್ರಾಮೂ ಹೆಚ್ಚಾಗಿಲ್ಲ. ಬಳಕುವ ಮೈಮಾಟ ಬದಾಲಾಗಿಲ್ಲ. ಏನಿದರ ಸೀಕ್ರೆಟು ಅಂತ ಕೇಳುವವರಿಗೆ ವೀಕೆಂಡ್ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿ ಉತ್ತರ ಕೊಟ್ಟಿದ್ದಾರೆ ಆಮಿ
ಸಪೂರ ಕಟಿಯ ಈ ಸುಂದರಿ ಫಿಟ್ ನೆಸ್ ವ್ಲಾಗ್ಗಳನ್ನ ಮಾಡಿ ಪೋಸ್ಟ್ ಮಾಡ್ತಾರೆ. ತನ್ನ ವರ್ಕೌಟ್ & ಡಯಟ್ ಸೀಕ್ರೆಟ್ ನ ಶೇರ್ ಮಾಡ್ತಾರೆ. ಈ ವಿಡಿಯೋಸ್ ನೋಡಿ ಹೆಣ್ಣುಮಕ್ಕಳು ಬ್ಯೂಟಿ ಸೀಕ್ರೆಟ್ ಕಲಿತಿದ್ರೆ ನಮ್ಮ ಪಡ್ಡೆ ಹೈಕಳು ಇವನ್ನ ನೋಡಿ ಕಣ್ ತಂಪು ಮಾಡಿಕೊಳ್ತಾ ಇದ್ದಾರೆ.
ನಮ್ಮ ಕನ್ನಡದ ದಿ ವಿಲನ್ ಮೂವಿಯಲ್ಲಿ ನಟಿಸಿದ್ದ ಈಕೆಯ ಅಂದವನ್ನ ಕಂಡು ‘ನೋಡಿವಳಂದವಾ.. ಮುತ್ತಿನ ಮಾಲೆ ಚೆಂದವಾ’ ಅಂತ ಪ್ರೇಮ್ ಹಾಡು ಬರೆದಿದ್ರು. ಈಗಲೂ ಆಮಿ ಬ್ಯೂಟಿ ನೋಡ್ತಾ ಇದ್ರೆ ಇದೇ ಹಾಡು ನೆನಪಾಗುತ್ತೆ.