Aug 23, 2022, 3:33 PM IST
ಸೌತ್ ಸಿನಿಮಾಗಳಿಗೆ ಈಗ ಗೋಲ್ಡನ್ ಟೈಂ. ಇಷ್ಟು ವರ್ಷ ಹಿಂದಿ ಸಿನಿಮಾಗಳು ವರ್ಲ್ಡ್ ವೈಡ್ ಮೇಳೈಸುತ್ತಿದ್ದವು. ಆದ್ರೆ ಈಗ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ವರ್ಲ್ಡ್ ವೈಡ್ ಬೇಡಿಕೆ ಬಂದಿದೆ. ಕೆಜಿಎಫ್, ಆರ್ ಆರ್ ಆರ್ ಸಿನಿಮಾಗಳು ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ರೆ, ಪುಷ್ಪ, ವಿಕ್ರಾಂತ್ ರೋಣ, 777 ಚಾರ್ಲಿ ಸಿನಿಮಾಗಳು ನೂರಾರು ಕೋಟಿ ಗಳಿಸಿವೆ. ಈ ಸಕ್ಸಸ್ ಇದೀಗ ಯಶ್, ಸುದೀಪ್, ಅಲ್ಲು ಅರ್ಜುನ್, ಜ್ಯೂಎನ್ಟಿಆರ್, ರಕ್ಷಿತ್ ಶೆಟ್ಟಿ, ರಾಮ್ ಚರಣ್ ತೇಜಾ ಸೇರಿದಂತೆ ದಕ್ಷಿಣದ ಹೀರೋಗಳು ಸಂಭಾವನೆಯನ್ನ ಹೆಚ್ಚಿಸುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಗೆ ಕೆಜಿಎಫ್ ಸಿನಿಮಾದ ಗೆಲುವು ದೊಡ್ಡ ಇಮೇಜ್ ಮಾತ್ರ ತಂದುಕೊಟ್ಟಿಲ್ಲ. ಕೀರ್ತಿ ಜೊತೆಗೆ ನೂರಾರು ಕೋಟಿ ಸಂಭಾವನೆಯನ್ನೂ ಕೊಟ್ಟಿದೆ. ಕೆಜಿಎಫ್-2 ಸಿನಿಮಾ 1250 ಕೋಟಿ ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡಿದೆ. ಈ ಕಲೆಕ್ಷನ್ ನ ಶೇಕಡ 30ರಷ್ಟು ಸಂಭಾವನೆಯನ್ನ ಯಶ್ ಪಡೆಯುತ್ತಿದ್ದಾರಂತೆ. ಅಂದ್ರೆ ಯಶ್ರ ಒಂದು ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಿದ್ರೆ ಅದರಲ್ಲಿ 300 ಕೋಟಿ ರಾಕಿ ಕಜಾನೆ ಸೇರುತ್ತೆ. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಕೂಡ ವಿಕ್ರಾಂತ್ ರೋಣ ಗೆಲುವಿನ ಬಳಿಕ ಸಂಭಾವನೆ ಹೆಚ್ಚಿಸಿದ್ದಾರೆ ಅನ್ನೋ ಮಾಹಿತಿ ಇದೆ. ಸದಾ ಕಾಲ ನಿರ್ಮಾಪಕರ ಕಷ್ಟಕ್ಕೆ ಹೆಗಲಾಗಿರೋ ಕಿಚ್ಚನಿಗೆ ಈಗ ಸಂಭಾವನೆ ಹೆಚ್ಚಿಸಿಕೊಳ್ಳುವ ರೈಟ್ ಟೈಂ ಬಂದಿದೆ. ಕಿಚ್ಚ ಈಗ ಒಂದ್ ಸಿನಿಮಾಗೆ 40 ಕೋಟಿ ಸಂಭಾವನೆ ಫಿಕ್ಸ್ ಮಾಡಿದ್ದಾರಂತೆ. ಅಷ್ಟೆ ಅಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 15 ಕೋಟಿಗೆ ತಮ್ಮ ಸ್ಟಾರ್ ವ್ಯಾಲ್ಯೂವನ್ನ ಏರಿಸಿಕೊಂಡಿದ್ದಾರಂತೆ.