ರಜನಿಕಾಂತ್​​ರ ಕೂಲಿಯಲ್ಲಿ ಕರ್ನಾಟಕದ ಹುಡುಗ?: ಶಾವೊಲಿನ್ ಕುಂಗ್ ಫೂ ಕಲಿತಿರೋ ಮಿಸ್ಟರ್​ ಇಂಡಿಯನ್​​ ಯಾರು?

Jul 11, 2024, 4:45 PM IST

ತಮಿಳು ಸೂಪರ್​ ಸ್ಟಾರ್​ ರಜನಿಕಾಂತ್ ಅಪ್ಪಟ ಕನ್ನಡಿಗ. ಕನ್ನಡ ನೆಲದ ಮೇಲೆ ತಲೈವಾಗೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಹುಟ್ಟಿ ಬೆಳೆದಿದ್ದು ಈ ನಾಡಿನಲ್ಲಿ ಆದ್ರೆ ಬದುಕು ಕಟ್ಟಿಕೊಂಡಿದ್ರು ಮಾತ್ರ ಪಕ್ಕದ ಅಣ್ತಮ್ಮ ತಮಿಳು ನಾಡಲ್ಲಿ. ಹೀಗಾಗಿ ರಜನಿಕಾಂತ್ ವರ್ಷಕ್ಕೆ ಏಳೆಂಟು ಭಾರಿಯಾದ್ರು ಕರುನಾಡಿಗೆ ಕಾಲಿಡುತ್ತಾರೆ. ತನ್ನ ಸ್ನೇಹಿತರು ಕುಟುಂಬದವರನ್ನ ಕಂಡು ಹೋಗುತ್ತಾರೆ. ಇನ್ನು ಅವರ ಸಿನಿಮಾದಲ್ಲಿ ಕನ್ನಡಿಗರು ಇದ್ರೆ ಕೇಳ್ಬೇಕಾ. ರಜನಿಗೆ ಅವರ ಮೇಲೆ ಅಪಾರ ಪ್ರೀತಿ ಗೌರವ. ಇಂತದ್ದೇ ಪ್ರೀತಿ ಗೌರವವನ್ನ ರಜನಿಕಾಂತ್​​ರಿಂದ ಸಂಪಾಧಿಸಿದ್ದಾನೆ ಇಲ್ಲೊಬ್ಬ ಕನ್ನಡದ ಹುಡುಗ. ಈ ಪೋಟೋ ನೋಡಿದ್ರೆ ಯಾರಪ್ಪಾ ಇದು ಅಂತ ಪಶ್ನೆ ಹುಟ್ಟುತ್ತೆ. ಯಾಕಂದ್ರೆ ಈ ಹುಡುಗ ಯಾರು ಅಂತ ಇದುವರೆಗೂ ಕನ್ನಡಿಗರಿಗೆ ಯಾರಿಗೂ ಗೊತ್ತಿಲ್ಲ. ಆದ್ರೆ ರಜನಿಕಾಂತ್ ಪಕ್ಕಾ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದೇ ಕೊಂಡಿದ್ದು. 

ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹುಡುಗ ಯಾರು ಅಂತ ಎಲ್ಲರೂ ಹುಡುಕೋಕೆ ಶುರು ಮಾಡಿದ್ದಾರೆ. ಆಗ ಸಿಕ್ಕ ಉತ್ತರವೇ ಈ ಬಾಯ್ ನಮ್ಮ ಕನ್ನಡದವ. ಅಪ್ಪಟ ಕನ್ನಡಿಗ ಅಂತ.ಸೂಪರ್ ಸ್ಟಾರ್ ಪಕ್ಕ ನಗುತ್ತಾ ನಿಂತು ಫೋಟೋಗೆ ಫೋಸ್ ಕೊಟ್ಟಿರೋ ಈ ಹುಡುಗ ಯಾರು ಗೊತ್ತಾ.? ಕೋಲಾರ ಮೂಲಕ ಯುವಕ. ಈತನ ಹೆಸರು ರಾಜೇಶ್​ ಸಂಜು ಅಂತ. ಇವರನ್ನ ಸೋಷಿಯಲ್ ಮೀಡಿಯಾದಲ್ಲಿ ಹುಡುಕಿದ್ರೆ. ಮಿಸ್ಟರ್​ ಇಂಡಿಯನ್ ಅಂತ ಸಿಗ್ತಾರೆ. ಈ ಹುಡುಗ ಫಿಲ್ಮ್​ ಮೇಕಿಂಗ್​​, ಸ್ಟೋರಿ ಟೆಲ್ಲರ್​ ಹಾಗು ಅಸಿಸ್ಟೆಂಡ್​ ಡೈರೆಕ್ಟರ್ ಅಂತೆ. ಸಧ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜೇಶ್​ ಸಂಜು ಶಾವೊಲಿನ್ ಕುಂಗ್ ಫೂ ಕೂಡ ಕಲಿತಿದ್ದಾರೆ. 

ಈಗ ಸೂಪರ್ ಸ್ಟಾರ್ ರಜನಿಕಾಂತ್ ಪಕ್ಕದಲ್ಲಿ ನಿಂತು ಟ್ರೆಂಡ್ ಆಗುತ್ತಿದ್ದಾರೆ. ಈ ಮಿಸ್ಟರ್​ ಇಂಡಿಯನ್​​ ರಾಜೇಶ್​ ಸಂಜು ತಲೈವಾ ರಜನಿಕಾಂತ್ ರ ಕೂಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಕುಂಗ್ ಫ್ಯೂ ಕಲೆ ಕಲಿತಿರೋ ರಾಜೇಶ್​​ ಸಂಜು ಕೂಲಿ ಸಿನಿಮಾದಲ್ಲಿ ಅಸಿಸ್ಟೆಂಡ್ ಡೈರೆಕ್ಟರ್ ಆಗಿಯೂ ಕೆಲಸ ಮಾಡುತ್ತಿದ್ದಾರಂತೆ. ಈತನ ಟ್ಯಾಲೆಂಟ್​ಗೆ ಫಿದಾ ಆಗಿರೋ ತಲೈವಾ ಬೆನ್ನು ತಟ್ಟಿದ್ದಾರಂತೆ. ಕಾಲಿವುಡ್‌ನಲ್ಲಿ ಲಿಯೋ, ಮಾಸ್ಟರ್, ಖೈದಿ, ವಿಕ್ರಮ್ ತರದ ಹಿಟ್​ ಸಿನಿಮಾಗಳನ್ನು ಕೊಟ್ಟಿರೋ ಸ್ಟಾರ್​ ಡೈರೆಕ್ಟರ್​ ಲೋಕೇಶ್ ಕನಕರಾಜ್‌ ರಜನಿಗೆ ಕೂಲಿಯಲ್ಲಿ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ರಜನಿಕಾಂತ್‌ & ಲೋಕೇಶ್ ಕನಕರಾಜ್‌ ಕಾಂಬಿನೇಷನ್​ನಲ್ಲಿರೋ ಮೂಡಿ ಬರುತ್ತಿರೋ ‘ಕೂಲಿ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.