Jan 27, 2023, 4:43 PM IST
ಬಾಲಿವುಡ್‌ನ ಮೋಸ್ಟ್ ವಾಂಟೆಂಡ್ ಹಾಟ್ ಬ್ಯೂಟೀಸ್ ಅಂತ ಕರೆಸಿಕೊಳ್ಳವ ನೋರಾ ಫತೇಹಿ ಹಾಗು ಜಾಕ್ವೆಲಿನ್ ಫರ್ನಾಂಡೀಸ್ ನಡುವಿನ ವಾರ್ ಜೋರಾಗಿದೆ. ಇಬ್ಬರ ಜಗಳಕ್ಕೆ ಕಾರವಾಗಿದ್ದು ಉದ್ಯಮಿ ಸುಕೇಶ್ ಚಂದ್ರಶೇಖರ್. ಜೈಲೂಟ ಮಾಡುತ್ತಿರೋ 200 ಕೋಟಿ ಸುಲಿಗೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಬಿಟೌನ್ ಬ್ಯೂಟೀಸ್ ನೋರಾ ಫತೇಹಿ ಹಾಗು ಜಾಕ್ವೆಲೀನ್ ಫರ್ನಾಂಡಿಸ್ ಡೇಟಿಂಗ್ ಮಾಡುತ್ತಿದ್ರು. ಸುಕೇಶ್ ಬಳಿ ಕೋಟಿ ಕೋಟಿ ದುಡ್ಡು ಪಡೆದು ಆತ ಹೇಳಿದಂತೆಲ್ಲಾ ಕೇಳುತ್ತಿದ್ರಂತೆ. ಸಧ್ಯ ಪೋಲೀಸ್ ಕಸ್ಟಡಿಯಲ್ಲಿರೋ ಸುಕೇಶ್ ಜಾಕ್ವೆಲೀನ್ ಮತ್ತು ನೂರಾ ಮಧ್ಯೆ ಇದ್ದ ಮುನಿಸಿನ ಬಗ್ಗೆ ಖಾಕಿ ಪಡೆ ಮುಂದೆ ಬಾಯ್ಬಿಟ್ಟಿದ್ದಾರೆ. ನಟಿ ನೋರಾ ಫತೇಹಿ ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಯಾವಾಗಲು ಅಸೂಯೆ ಪಡುತ್ತಿದ್ರು, ನೋರಾ ಯಾವಾಗಲೂ ಜಾಕ್ವೆಲಿನ್ನಿಂದ ದೂರ ಇರುವಂತೆ ಹೇಳುತ್ತಾ ತನ್ನ ಜೊತೆ ಡೇಟಿಂಗ್ ಮಾಡುವಂತೆ ಪೀಡಿಸುತ್ತಿದ್ರು, ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನಗೆ ಕರೆ ಮಾಡುತ್ತಿದ್ರು, ನಾನು ಜಾಕ್ವೆಲಿನ್ ಜೊತೆ ರಿಲೇಷನ್ ಶಿಪ್‌ನಲ್ಲಿ ಇರುವುದು ಇಷ್ಟವಿರಲಿಲ್ಲ ಎಂದು ಬಾಯ್ಬಿಟ್ಟಿದ್ದಾನೆ.