Feb 25, 2023, 11:17 AM IST
ಎನ್‌ಟಿಆರ್ ಪುತ್ರ, ನಟ, ರಾಜಕಾರಣಿ ನಂದಮೂರಿ ತಾರಕ ರತ್ನ ನಿಧನ ಹೊಂದುತ್ತಾರೆಂದು ಮೊದಲೇ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು ಎನ್ನಲಾಗುತ್ತಿದ್ದು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗಿದೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೇಣು ಸ್ವಾಮಿ, 45 ವರ್ಷ ವಯಸ್ಸಿನ ಒಳಗಿನ ನಾಯಕ ನಟ, ನಾಯಕ ನಟಿ ನಿಧನ ಹೊಂದಲಿದ್ದಾರೆ ಎಂದಿದ್ದರು. ಮೇಷ ರಾಶಿಗೆ ಸಂಬಂಧಿಸಿದ ನಟಿ, ವೃಷ್ಚಿಕ ಅಥವಾ ಮಿಥುನ ರಾಶಿಗೆ ಸಂಬಂಧಿಸಿದ ನಟ ನಿಧನ ಹೊಂದಲಿದ್ದಾರೆ ಎಂದೂ ಸಹ ಅವರು ಖಚಿತವಾಗಿ ತಿಳಿಸಿದ್ದರು. ಇದೀಗ ತಾರಕ ರತ್ನ ತಮ್ಮ 39ನೇ ವಯಸ್ಸಿಗೇ ನಿಧನ ಹೊಂದಿರುವ ಕಾರಣ ಹಲವರು ವೇಣು ಸ್ವಾಮಿ ಭವಿಷ್ಯ ನಿಜವಾಗಿದೆ ಎನ್ನುತ್ತಿದ್ದಾರೆ.
ಜೊತೆಗೆ ವೇಣು ಸ್ವಾಮಿ ಹೇಳಿರುವ ಆ ನಟಿ ಯಾರು ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಕೆಲವರು ವೇಣು ಸ್ವಾಮಿಯ ಭವಿಷ್ಯದ ಬಗ್ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದು, ವೇಣು ಸ್ವಾಮಿಯನ್ನು ಪ್ರಚಾರ ಪ್ರಿಯನೆಂದು, ಕೆಟ್ಟದ್ದನ್ನು ಮಾತ್ರವೇ ಹೇಳಿ ಬೆದರಿಸುತ್ತಾನೆಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೇಣು ಸ್ವಾಮಿ ತೆಲುಗು ಚಿತ್ರರಂಗದ ಕೆಲವು ಜನಪ್ರಿಯ ಸಿನಿಮಾ ಮಂದಿಯ ಬಗ್ಗೆ ಈ ಹಿಂದೆಯೂ ಭವಿಷ್ಯ ಹೇಳಿದ್ದಾರೆ. ನಾಗ ಚೈತನ್ಯ-ಸಮಂತಾ ವಿವಾಹವಾದಾಗ ಇವರಿಬ್ಬರೂ ಬೇರೆಯಾಗುತ್ತಾರೆ ಎಂದಿದ್ದರು. ಅಂತೆಯೇ ಆಯಿತು. ನಟಿ ರಶ್ಮಿಕಾ ಮಂದಣ್ಣ ಸಹ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ವೇಣು ಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ರಶ್ಮಿಕಾ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿರುವ ವೇಣು ಸ್ವಾಮಿ, ವಿಜಯ್ ದೇವರಕೊಂಡ ಜೊತೆಗಿದ್ದರೆ ರಶ್ಮಿಕಾ ತಮ್ಮ ಯಶಸ್ಸು ಕಳೆದುಕೊಳ್ಳುತ್ತಾರೆ ಎಂದೂ ಸಹ ಭವಿಷ್ಯ ನುಡಿದಿದ್ದಾರೆ.
ಅದರಂತೆ ವಿಜಯ್ ದೇವರಕೊಂಡ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ರಷ್ಮಿಕಾ ಹಿಂದಿ ಸಿನಿಮಾ ಮಕಾಡೆ ಮಲಗಿತು. ಮಹೇಶ್ ಬಾಬು ಮನೆಯಲ್ಲಿ 2020 ರ ನಂತರ ಸಾವು ಸಂಭವಿಸುತ್ತೆ ಅದಕ್ಕೆ ಕಾರಣ ಮಹೇಶ್ ಬಾಬು ಜಾತಕ ಎಂದು ಮೊದಲೇ ನುಡಿದಿದ್ದರಂತೆ ಜ್ಯೋತಿಷಿ ವೇಣು ಸ್ವಾಮಿ, ಇದರಿಂದ ಮಹೇಶ್ ಬಾಬು ಕುಟುಂಬ ಇವರನ್ನು ದೂರ ಇಟ್ಟಿತ್ತಂತೆ. ಟಾಲಿವುಡ್ ಸೆಲೆಬ್ರೆಟಿ ಜ್ಯೋತಿಷಿ ಎಂದೆ ಹೆಸರಾಗಿರುವ ವೇಣುಸ್ವಾಮಿ ಪ್ರಭಾಸ್ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಮದುವೆಯಾಗುವಂತಿಲ್ಲ. ಮದುವೆ ಆದ್ರೆ ಆತ್ಮಹತ್ಯೆ ಮಾಡಿಕೊಂಡ ಉದಯ್ ಕಿರಣ್ ಸ್ಥಿತಿಯೇ ಇವರಿಗೂ ಬರುತ್ತದಂತೆ. ಅದಕ್ಕೆ ಪ್ರಭಾಸ್ ಮದುವೆ ಆಗುತ್ತಿಲ್ಲವಾ ಎಂಬ ಅನುಮಾನ ಇದೀಗ ಶುರುವಾಗಿದೆ.
ಯಂಗ್ ಟೈಗರ್ ಜೂ.ಎನ್‌ಟಿಆರ್ ಭವಿಷ್ಯದಲ್ಲಿ ರಾಜಕೀಯಕ್ಕೆ ಬಂದರೆ ಸಿಎಂ ಕೂಡ ಆಗಬಹುದು ಎಂಬ ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಈ ಜ್ಯೋತಿಷಿ ಎಂದರೆ ಸದ್ಯ ಟಾಲಿವುಡ್ ಬೆಚ್ಚಿಬೀಳುತ್ತಿದೆ. ಇವರ ನೇರ ನುಡಿ ಭಯಪಡಿಸುವ ಭಯಂಕರ ಸತ್ಯಗಳು ಇವರ ಸಾವಾಸಾನೆ ಬೇಡ ಎಂದು ಕೆಲವರು ದೂರವಿಟ್ಟಿದ್ದಾರೆ ಇವರನ್ನು. ಇನ್ನು ಕೆಲವರು ಇವರು ಹೇಳಿದ್ದೆಲ್ಲ ಸತ್ಯವಾಗ್ತಿದೆ ಅಂತ ಇವರ ಬಳಿ ಭವಿಷ್ಯ ತಿಳಿಯಲು ಮುಗಿಬೀಳುತ್ತಿದ್ದಾರೆ. ಏನೇ ನಡೆದರು ಗ್ರಹಗತಿ ರಾಶಿಫಲಗಳೇ ಕಾರಣ ಅನ್ನೋದು ಇವರ ವಾದ. ಆದರೆ ಪ್ರಚಾರ ಪ್ರಿಯ ಜ್ಯೋತಿಷಿ ಯಾವಾಗಲೂ ಎಲ್ಲರಿಗೂ ನೆಗೆಟಿವ್ ವಿಚಾರಗಳನ್ನೆ ಹೇಳೋ ಜ್ಯೋತಿಷಿ ಎಂದು ಒಂದಷ್ಟು ಜನ ಇವರ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಇವರ ವೀಡಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿರೋದಂತು ನಿಜ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment