ಪಂಚೆಯುಟ್ಟು ಕುಣಿದಿದ್ದಕ್ಕೆ ಎದುರಾಯ್ತು ಕಿರಿಕ್: ಸಲ್ಮಾನ್ ಸಿನಿಮಾ ಬ್ಯಾನ್‌ ಮಾಡಲು ಅಭಿಯಾನ!

Apr 13, 2023, 9:01 PM IST

ಬಾಲಿವುಡ್ ನಟ ಸಲ್ಮಾನ್​ ಖಾನ್ ಅವರು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಈದ್​ ಹಬ್ಬದ ಪ್ರಯುಕ್ತ ಏಪ್ರಿಲ್​ 21ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ರಿಲೀಸ್​ ಆಗಲಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ‘ಯೆಂಟಮ್ಮಾ..’ ಹಾಡು ಬಿಡುಗಡೆ ಆಯಿತು. ಎಲ್ಲ ಕಡೆಗಳಿಂದ ಈ ಗೀತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಲ್ಲಿ ಸಲ್ಮಾನ್​ ಖಾನ್​ ಅವರು ಪಂಚೆ ಧರಿಸಿ ಕುಣಿದಿದ್ದಾರೆ. ಅವರಿಗೆ ರಾಮ್​ ಚರಣ್​, ದಗ್ಗುಬಾಟಿ ವೆಂಕಟೇಶ್​ ಕೂಡ ಸಾಥ್​ ನೀಡಿದ್ದಾರೆ. ಆದರೆ ಈ ಹಾಡಿನ ವಿರುದ್ಧ ಕೆಲವರು ಕಿಡಿಕಾರಿದ್ದಾರೆ. ಹೌದು! ಸಿನಿತಾರೆಯರ ಒಂದು ಎಡವಟ್ಟನ್ನು ಮುಂದಿಟ್ಟುಕೊಂಡು ಅವರ ಸಿನಿಮಾವನ್ನೇ ಬ್ಯಾನ್‌ ಮಾಡುವ ಟ್ರೆಂಡ್‌ ಈಗ ಸಾಮಾನ್ಯವಾಗಿದೆ.  ಪಂಚೆಯುಟ್ಟು ಡ್ಯಾನ್ಸ್‌ ಮಾಡಿದ ಸಲ್ಮಾನ್ ಖಾನ್ ಸಿನಿಮಾವನ್ನು ಬ್ಯಾನ್‌ ಮಾಡಲು ಇದೀಗ ಅಭಿಯಾನ ಶುರುವಾಗಿದೆ.