Mar 12, 2022, 12:10 PM IST
ಕಾರ್ತಿಕ್ ಆರ್ಯನ್ (Kartik Aaryan) ಬಾಲಿವುಡ್‌ನ (Bollywood) ಯಂಗ್ ನಟ. ಚಾಕಲೇಟ್ ಹೀರೋ ಪಾತ್ರಗಳನ್ನೇ ಮಾಡಿರೋ ನಟ ಹೆಣ್ಮಕ್ಕಳ ಹಾಟ್ ಫೇವರೇಟ್. ಇದೀಗ ಸಾಮಾಜಿಕ ಮಾಧ್ಯಮದಲ್ಲಿ (Social Media) ತಾವು ಮಹಿಳಾ ಅಭಿಮಾನಿಯೊಬ್ಬರಿಗೆ ನೀಡಿದ ಉತ್ತರದಿಂದ ನೆಟ್ಟಿಗರ ಮನವನ್ನು ಗೆದ್ದಿದ್ದಾರೆ ಎಂದು ಹೇಳಬಹುದು. ಹೌದು! ಮಹಿಳಾ ಅಭಿಮಾನಿಯ ಮದುವೆ ಪ್ರಪೋಸಲ್‌ಗೆ ವಿಭಿನ್ನವಾಗಿ ಶಾಕ್ ಆಗುವ ರೀತಿಯಲ್ಲಿ ಉತ್ತರ ನೀಡಿದ್ದು, ನೆಟ್ಟಿಗರ ಮನವನ್ನು ಕ್ಷಣ ಮಾತ್ರದಲ್ಲಿ ಕಾರ್ತಿಕ್ ಆರ್ಯನ್ ಗೆದ್ದಿದ್ದಾರೆ ಎಂದು ಹೇಳಬಹುದು.
Kartik Aryan: ಬಾಲಿವುಡ್ ಸ್ಟಾರ್ ನಟನ ಮನೆ ಮುಂದೆ ಕಿರುಚಾಡಿದ ಹೆಣ್ಮಕ್ಕಳು!
'ಧಮಾಕ' (Dhamaka) ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಹೊಡೆದಿರುವ ಪಂಚ್ ಡೈಲಾಗ್‌ನ್ನು ಮಹಿಳಾ ಅಭಿಮಾನಿಗಳು ಮಿಮಿಕ್ ಮಾಡಿದ್ದಾರೆ. ಇದನ್ನು ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತೊಂದು ಫೋಟೋ ಹಂಚಿಕೊಂಡ ಕಾರ್ತಿಕ್‌ಗೆ 'ನನ್ನನ್ನು ಮದುವೆಯಾದರೆ ನಿನಗೆ 20 ಕೋಟಿ ರೂಪಾಯಿ ಕೊಡ್ತೀನಿ' ಅಂತ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮಹಿಳಾ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಒಂದು ಸೆಕೆಂಡ್ ಕೂಡ ಯೋಚನೆ ಮಾಡದೆ 'ನಾನು ರೆಡಿ ಯಾವತ್ತು' ಎಂದು ಆರ್ಯನ್ ಮರು ಉತ್ತರ ನೀಡಿದ್ದಾರೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies