ಬರ್ತ್​ಡೇಗೆ ಬಿಗ್ ಗಿಫ್ಟ್: ಡಾರ್ಲಿಂಗ್ ಪ್ರಭಾಸ್ ಅಕೌಂಟ್​​ನಲ್ಲಿ 5 ಪ್ರಾಜೆಕ್ಟ್!

Oct 24, 2024, 4:27 PM IST

ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಲಾರ್ ಅಂಡ್ ಕಲ್ಕಿ ಸಕ್ಸಸ್ ಬಳಿಕ ಸಕ್ಸಸ್ ಫಾರ್ಮ್​ಗೆ ಬಂದಿರೋ ಪ್ರಭಾಸ್ ಸದ್ಯ ಒಂದಲ್ಲ ಎರಡಲ್ಲ ಐದೈದು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ. ಪ್ಯಾನ್ ಇಂಡಿಯ ಸ್ಟಾರ್ ಪ್ರಭಾಸ್ ಸಿನಿಮಾಗಳ ಲೈನ್ ಅಪ್ ಹೇಗಿದೆ ಅಂದ್ರೆ ಅಭಿಮಾನಿಗಳಿಗೆ ಹಬ್ಬದೂಟ ಫಿಕ್ಸ್ ಆಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. ಬಾಹುಬಲಿ ಸೀರಿಸ್ ಸಕ್ಸಸ್ ಬಳಿಕ ಗ್ಲೋಬಲ್ ಲೆವೆಲ್​ನಲ್ಲಿ ತನ್ನದೇ ಮಾರ್ಕೆಟ್ ಸೃಷ್ಟಿಸಿಕೊಂಡ ಪ್ರಭಾಸ್​ಗೆ ಆ ಬಳಿಕ ಬಂದ ಸಿನಿಮಾಗಳು ಮಾತ್ರ ದೊಡ್ಡ ಮಟ್ಟದಲ್ಲಿ ಕೈ ಹಿಡಿದಿರಲಿಲ್ಲ. ಆದ್ರೆ ಸಲಾರ್ ಅಂಡ್ ಕಲ್ಕಿ 2898 ಎಡಿ ಸಿನಿಮಾಗಳ ಸಕ್ಸಸ್ ಮತ್ತೆ ಪ್ರಭಾಸ್​​ನ ಯಶಸ್ಸಿನ ಹಳಿ ಮೇಲೆ ತಂದು ನಿಲ್ಲಿಸಿವೆ. ಸಲಾರ್ ಸಿನಿಮಾ ವರ್ಲ್ಡ್ ವೈಡ್ 700 ಪ್ಲಸ್ ಕೋಟಿ ಗಳಿಕೆ ಮಾಡಿದ್ರೆ, ಕಲ್ಕಿ 2898 AD ಬರೊಬ್ಬರಿ 1100 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್​​ನಲ್ಲಿ ಧೂಳ್ ಎಬ್ಬಿಸ್ತು. 

ಸದ್ಯ ಯಶಸ್ಸಿನ ಅಲೆಯನ್ನ ಮುಂದುವರೆಸಿಕೊಂಡು ಹೋಗೋ ಉತ್ಸಾಹದಲ್ಲಿರೋ ಪ್ರಭಾಸ್ ಬರೊಬ್ಬರಿ 5 ಸಿನಿಮಾಗಳಿಗೆ ಕಾಲ್​ಶೀಟ್ ಕೊಟ್ಟಿದ್ದಾರೆ. ಹೌದು ಪ್ರಭಾಸ್ ನಟನೆಯ ಮುಂದಿನ ಸಿನಿಮಾ ದಿ ರಾಜಾ ಸಾಬ್. ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಌಕ್ಷನ್ ಸಿನಿಮಾದಲ್ಲಿ ಮಿಂಚಿರೋ ಡಾರ್ಲಿಗ್ ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಫ್ಯಾನ್ಸ್ ಮುಂದೆ ಬರ್ತಾ ಇದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರರ್ ಕಾಮಿಡಿ ಕಹಾನಿಯಾಗಿದ್ದು , ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನ್ ಪ್ರಭಾಸ್ ಜೋಡಿಯಾಗಿ ಮಿಂಚಿದ್ದಾರೆ. 2025ರ ಏಪ್ರಿಲ್ 10ಕ್ಕೆ ಈ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅನಿಮಲ್ ಮೂಲಕ ಮೋಡಿ ಮಾಡಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗೆ ಪ್ರಭಾಸ್ ಸಿನಿಮಾ ಮಾಡಲಿದ್ದು ಅದಕ್ಕೆ ಸ್ಪಿರಿಟ್ ಅನ್ನೋ ಟೈಟಲ್ ಫೈನಲ್ ಆಗಿದೆ. 

ಸದ್ಯ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೀತಾ ಇದೆ. ಇನ್ನೂ ನಿರ್ದೇಶಕ ಹನು ರಾಘವಪುಡಿ ಜೊತೆಗೆ ಪಿರಿಯಾಡಿಕ್ ಸಿನಿಮಾದಲ್ಲಿ ಪ್ರಭಾಸ್ ನಟಿಸ್ತಾ ಇದ್ದು ಈಗಾಗ್ಲೇ ಅದರ ಮುಹೂರ್ತ ಕೂಡ ನಡದಿದೆ. ಸಲಾರ್ ಸಿನಿಮಾದ ಸೀಕ್ವೆಲ್ ಶೌರ್ಯಾಂಗ ಪರ್ವ ಬರೋದು ಈಗಾಗ್ಲೇ ಅನೌನ್ಸ್ ಆಗಿದೆ. ಬಹುತೇಕ ಮುಂದಿನ ವರ್ಷ ಕೊನೆಗೆ ಆ ಸಿನಿಮಾ ಸೆಟ್ಟೇರಲಿದೆ. ಇನ್ನೂ ಕಲ್ಕಿಯ ಪಾರ್ಟ್-2 ಕೂಡ ಬರಲಿದ್ದು ನಿರ್ದೇಶಕ ನಾಗ್ ಅಶ್ವಿನ್ ಪ್ರೀ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿದ್ದಾರೆ. ಸೋ ಈ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳ ಸೀಕ್ವೆಲ್ ಬರಲಿದ್ದು, ಫ್ಯಾನ್ಸ್​​ಗೆ ಮತ್ತಷ್ಟು ಥ್ರಿಲ್ ಕೊಡಲಿದೆ. ಸೋ ಇಷ್ಟೆಲ್ಲಾ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿರೋ ಪ್ರಭಾಸ್, ಮುಂದಿನ ದಿನಗಳಲ್ಲಿ ಫ್ಯಾನ್ಸ್ ಗೆ ಡಿಫರ್ರೆಂಟ್ ಅವತಾರಗಳಲ್ಲಿ ರಂಜನೆ ಕೊಡಲಿದ್ದಾರೆ. ಸೋ ಡಾರ್ಲಿಂಗ್ ಡ್ಯಾಶಿಂಗ್ ಅವತಾರಗಳನ್ನ ನೋಡೋದಕ್ಕೆ ನೀವು ಕೂಡ ಸಜ್ಜಾಗಿ.