ಸಿನಿಮಾಗೆ ಓಕೆ ಅಂದು ಶೂಟಿಂಗ್‌ಗೆ ಬಾರದ ತೆಲುಗು ನಟ: ಅರ್ಜುನ್ ಸರ್ಜಾಗೆ ಅವಮಾನ

Nov 8, 2022, 12:49 PM IST

ಅರ್ಜುನ್ ಸರ್ಜಾ ಅವರು ತಮ್ಮ ಮಗಳನ್ನು ಲಾಂಚ್‌ ಮಾಡಲು ಸಿನಿಮಾ ಮಾಡ್ತಾ ಇದ್ದರು. ಆ  ಸಿನಿಮಾ ಮೂರ್ಹೂತಕ್ಕೆ ಪವನ್ ಕಲ್ಯಾಣ್‌ ಬಂದು ಕ್ಲ್ಯಾಪ್‌ ಮಾಡಿ ಶುಭ ಕೋರಿದ್ದರು. ಹಾಗೂ ಇತ್ತೀಚೆಗೆ ವಿಶ್ವಕ್‌ ಸೇನ್‌ ಸಿನಿಮಾ ಕಥೆ ಕೇಳಿ ಒಪ್ಪಿಕೊಂಡಿದ್ದರು. ಅದಲ್ಲದೆ ಸಿನಿಮಾಕ್ಕೆ ಹೆಚ್ಚು ಸಂಭಾವನೆ ಕೂಡ ಕೇಳಿದ್ದರು. ಅದಕ್ಕೆ ಅರ್ಜುನ್ ಸರ್ಜಾ ಒಪ್ಪಿಕೊಂಡಿದ್ದರು. ಕಥೆ ಓಕೆ ಮಾಡಿ ಡೇಟ್‌ ಕೊಟ್ಟು ಸಿನಿಮಾ  ಮೂರ್ಹೂತಕ್ಕೂ ಬಂದು, ಆಮೇಲೆ ಸಿನಿಮಾ ಶೂಟಿಂಗ್‌'ಗೆ ಬನ್ನಿ ಅಂದರೆ ಫೋನ್‌ ತೆಗೆಯುತ್ತಿಲ್ಲವಂತೆ. ಅರ್ಜುನ್ ಸರ್ಜಾ ಸಾವಿರ ಸಲ ಕಾಲ್‌ ಮಾಡಿದ್ದರಂತೆ. ಹಾಗೂ ಕಾಸ್ಟ್ಯೂಮ್ ಡಿಸೈನರ್‌ ಅನ್ನು ಕಳಿಸಿದರೂ ನೋ ರೆಸ್ಪಾನ್ಸ್‌. ಮುಂದಿನ ತಿಂಗಳೂ ಶೂಟಿಂಗ್‌ ಇದೆ ಎಂದು ಹೇಳಿದರೆ, ಏನು ಹೇಳಿಲ್ಲಂತೆ. ಯಾಕೆ ಈ ಫಿಲ್ಮಂ ಬಿಟ್ಟರು ಎಂದು ಕೇಳಿದರೆ ಹೇಳುತ್ತಿಲ್ಲವಂತೆ.