Mar 27, 2023, 4:52 PM IST
ಪುನೀತ್ ರಾಜ್‍ಕುಮಾರ್ ನಿಧನರಾದ ಮೇಲೆ ನಟ ಪ್ರಕಾಶ್ ರೈ ಅವರು ಅಪ್ಪು ಎಕ್ಸ್ ಪ್ರೆಸ್' ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಮುಂದಾಗಿದ್ದರು. ಅಪ್ಪು ನಟನೆಯ ಗಂಧದ ಗುಡಿ ಪ್ರಿ ರಿಲೀಸ್ ಕಾರ್ಯಕ್ರಮದ ವೇಳೆ ಪ್ರಕಾಶ್ ರೈ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಆಗ ರಾಕಿಂಗ್ ಸ್ಟಾರ್ ಯಶ್ ತಾವು ಕೂಡ ಪ್ರಕಾಶ್ ರೈ ಅವರ ಕಾರ್ಯಕ್ಕೆ ಕೈ ಜೋಡಿಸುವುದಾಗಿ ತಿಳಿಸಿದ್ದರು. ಈಗ ಕೊಟ್ಟ ಮಾತಿನಂತೆ ಯಶ್ ಅವರು ಈಗ ತಮ್ಮ ಯಶೋ ಮಾರ್ಗ ಫೌಂಡೇಶನ್ ಮೂಲಕ 5 ಆ್ಯಂಬುಲೆನ್ಸ್‌ಳನ್ನು ಕೊಡುಗೆ ಆಗಿ ನೀಡಿದ್ದು ಈ ವಿಷಯವನ್ನು ಪ್ರಕಾಶ್ ರೈ ಅವರು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಯಶ್ ಅವರು ನೀಡಿರುವ 5 ಆ್ಯಂಬುಲೆನ್ಸ್‍ಗಳ ಸೇವೆಯನ್ನು ಬೀದರ್, ಕಲಬುರಗಿ, ಉಡುಪಿ, ಕೊಳ್ಳೇಗಾಲ, ಕೊಪ್ಪಳ ಜಿಲ್ಲೆಗಳಿಗೆ ನೀಡಲಾಗಿದೆ ಎಂದು ಪ್ರಕಾಶ್ ರೈ ತಿಳಿಸಿದ್ದಾರೆ.