ರೇವಂತ್ ರೆಡ್ಡಿ vs ಅಲ್ಲು ಅರ್ಜುನ್: ರೀಲ್-ರಿಯಲ್ ಫೈಟ್! ಸದನದೊಳಗೆ ಸಿಎಂ ಮಾಡಿದ ಆ ಶಪಥ ಏನು?

Dec 23, 2024, 10:03 PM IST

ಸಾವು,ಜೈಲು,ಏಟು,ಎದಿರೇಟು, ಅಲ್ಲು ರೆಡ್ಡಿ ಕಾಳಗ. ‘’ಅವನ ಕೈ-ಕಾಲು ಮುರಿದಿದ್ಯಾ,ಕಿಡ್ನಿ ಹೋಗಿದ್ಯಾ?’’ ಗುಡುಗಿದ ರೇವಂತ್ ರೆಡ್ಡಿ. ಪುಷ್ಪರಾಜ Vs ರಾಜ್ಯರಾಜ. ರೀಲ್..ರಿಯಲ್ ಫೈಟ್. ತೆಲುಗು ಹೀರೋಗಳ ವಿರುದ್ಧ ಜಿದ್ದಿಗೆ ಬಿದ್ದರಾ ರಗಡ್ ರೆಡ್ಡಿ? ಪುಷ್ಪರಾಜನ  ವಿರುದ್ಧ ಸದನದಲ್ಲೇ ಸಿಡಿದ ಸಿಎಂ ರೇವಂತ್ ರೆಡ್ಡಿ ರಣಾರ್ಭಟ. ಇಡೀ ಟಾಲಿವುಡ್ಗೆ ರೇವಂತ್ ರೆಡ್ಡಿ ಬಿಗ್ ಶಾಕ್ 

ರೇವಂತ್ ರೆಡ್ಡಿ ತಮ್ಮ ಮೇಲೆ ಹರಿಹಾಯ್ತಾ ಇದ್ಹಾಗೆ, ಅಲ್ಲು ಅರ್ಜುನ್ ಕೂಡ ಸುಮ್ಮನೇ ಕೂರದೇ ಕೂಡಲೇ ರಿಯಾಕ್ಟ್ ಮಾಡಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿಯೇ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮೇಲೆ ವಾಗ್ದಾಳಿಯನ್ನ ಮಾಡಿದ್ದು ಮಾತ್ರವಲ್ಲ. ಮತ್ತೆ ಒಂದಿಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಕೂಡಲೇ ಆ ಆರೋಪಗಳಿಗೆ ರಿಯಾಕ್ಟ್ ಮಾಡೋ ಕೆಲಸವನ್ನುಅಲ್ಲು ಅರ್ಜುನ್ ಮಾಡಿದ್ದಾರೆ.  

ಶನಿವಾರ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮೇಲೆ ಹರಿಹಾಯ್ದಿದ್ರೆ, ಭಾನುವಾರ ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಅಲ್ಲು ವಿರುದ್ಧ ಗುಡುಗಿದ್ದಾರೆ.  ಅಲ್ಲು ಅರ್ಜುನ್ ವಿರುದ್ಧ ಶನಿವಾರ ತೆಲಂಗಾಣ ಸಿಎಂ ರೇವಂತ್ ರೆಡ್ಡಿ  ಒಂದಿಷ್ಟು ಆರೋಪಗಳನ್ನು ಮಾಡಿದ್ರು. ಅಂದೇ ಅದಕ್ಕೆ ಉತ್ತರ ಕೊಡೋ ಪ್ರಯತ್ನ ಅಲ್ಲು ಅರ್ಜುನ್ ಕಡೆಯಿಂದ ಆಗಿತ್ತು. ಈ ವೇಳೆ ಈ ಘಟನೆಯಲ್ಲಿ ಯಾರದ್ದು ತಪ್ಪಿಲ್ಲ ಅನ್ನೋ ಮಾತನ್ನ ಅಲ್ಲು ಆಡಿದ್ರು. ಈಗ ಅದೇ ಮಾತನ್ನೇ ಮುಂದಿಡ್ಕೊಂಡು ಎಸಿಪಿ ಸಬ್ಬತಿ ವಿಷ್ಣುಮೂರ್ತಿ ಪುಷ್ಪರಾಜನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.