Apr 7, 2023, 4:27 PM IST
'ಪುಷ್ಪ 2' ಬಗ್ಗೆ ಫ್ಯಾನ್ಸ್ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪಾರ್ಟ್ 2 ಶೂಟಿಂಗ್ ಆರಂಭವಾಗಿದ್ದರು ಚಿತ್ರತಂಡ ಮಾತ್ರ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಪುಷ್ಪ 2 ಮೊದಲ ಟೀಸರ್ ಅನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ರಿಲೀಸ್ ಮಾಡಲು 'ಪುಷ್ಪ 2' ಟೀಮ್ ಸಜ್ಜಾಗಿದ್ದು, ಟೀಸರ್ ರಿಲೀಸ್ ಡೇಟ್ ಅನ್ನು ಕೂಡ ಬಹಳ ವಿಶಿಷ್ಠವಾಗಿ ಘೋಷಣೆ ಮಾಡಿದೆ. ಸಣ್ಣ ಪ್ರೋಮೋವೊಂದನ್ನು ಐದು ಭಾಷೆಗಳಲ್ಲಿ ಚಿತ್ರತಂಡ ರಿಲೀಸ್ ಮಾಡಿದ್ದು,ಅದರಲ್ಲಿ 'ತಿರುಪತಿ ಜೈಲಿನಿಂದ ಬುಲೆಟ್ ಗಾಯಗಳೊಂದಿಗೆ ತಪ್ಪಿಸಿಕೊಂಡ ಪುಷ್ಪ' ಎಂದು ವಾರ್ತಾ ನಿರೂಪಕರೊಬ್ಬರು ಹೇಳುವ ಡೈಲಾಗ್ ಇದೆ. ಹೀಗಾಗಿ ವ್ಯಕ್ತಿ ಬೈಕ್‌ನಲ್ಲಿ ಹೋಗುತ್ತಿರುವ ಸೀನ್ ಇದೆ. ಅದಲ್ಲದೆ ಪ್ರತಿಭಟನೆಗಳು ಆಗುತ್ತಿರುವ ದೃಶ್ಯನೂ ಇದೆ.