ಫ್ಯಾನ್ಸ್​ಗೆ ಬಿಗ್ ನ್ಯೂಸ್ ಕೊಟ್ಟ ಪುಷ್ಪರಾಜ್: ನಿಗದಿಗಿಂತ ಒಂದು ದಿನ ಮೊದಲೇ ಪುಷ್ಪ ಎಂಟ್ರಿ

Oct 25, 2024, 4:22 PM IST

ಪುಷ್ಪ-2 ಸಿನಿಮಾ ರಿಲೀಸ್​ಗೂ ಮೊದಲೇ ಸಾವಿರ ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿದ್ದು, ಸಿನಿಜಗತ್ತಿನಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಇನ್ನೇನು ಡಿಸೆಂಬರ್ ಮೊದಲ ವಾರ ತೆರೆಗೆ ಬರೋದಕ್ಕೆ ಸಜ್ಜಾಗಿರೋ ಪುಷ್ಪ-2 ಟೀಂ ಸದ್ಯ ಒಂದು ಬಿಗ್ ಅಪ್​ಡೇಟ್ ಕೊಟ್ಟಿದೆ. ಸದ್ಯದ  ಮೋಸ್ಟ್ ಅವೇಟೆಡ್ ಪ್ಯಾನ್ ಇಂಡಿಯಾ ಮೂವಿ ಅಂದ್ರೆ ಅದು ಪುಷ್ಪ-2. ಪುಷ್ಪ - ದಿ ರೈಸ್ ಸಿನಿಮಾದ ಅಮೋಘ ಸಕ್ಸಸ್ ಬಳಿಕ ಪುಷ್ಪ ಸೀಕ್ವೆಲ್​ಗೆ ದೊಡ್ಡ ಮಟ್ಟದ ಶ್ರಮ ಹಾಕಿ ರೆಡಿಮಾಡಿದೆ ಚಿತ್ರತಂಡ.  ನಿರ್ದೇಶಕ ಸುಕುಮಾರ್ ದೊಡ್ಡ ಕ್ಯಾನ್ವಾಸ್​​ನ ಕಥೆ ಹೆಣೆದು ದೊಡ್ಡ ಮಟ್ಟದಲ್ಲಿ ಸಿನಿಮಾ ರೆಡಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗಾಗಿ ಭರ್ತಿ 500 ಕೋಟಿ ಹೂಡಿಕೆ ಮಾಡಿದೆ. ಅಲ್ಲು ಅರ್ಜುನ್ ಈ ಪ್ರಾಜೆಕ್ಟ್​ಗಾಗಿ ಬರೊಬ್ಬರಿ 3 ವರ್ಷ ಕಳೆದಿದ್ದಾರೆ. ಸೋ ಇಷ್ಟೆಲ್ಲಾ ಶ್ರಮದೊಂದಿಗೆ ರೆಡಿಯಾಗಿರೋ ಸಿನಿಮಾ,  ಅಷ್ಟೇ ದೊಡ್ಡ ನಿರೀಕ್ಷೆ ಸೃಷ್ಟಿ ಮಾಡಿದೆ. 

ಆ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಆಗಿದೆ. ಈಗಾಗ್ಲೇ ಪುಷ್ಪ-2 ಟೀಮ್ ಸಾವಿರ ಕೋಟಿ ಗಳಿಕೆ ಮಾಡಿರೋ ಸುದ್ದಿ ಇದೆ. ಸದ್ಯ ಇದೇ ಖುಷಿಯಲ್ಲಿ ಮಿಡಿಯಾ ಮುಂದೆ ಬಂದಿರೊ ಪುಷ್ಪ- ಟೀಂ ಮತ್ತೊಂದು ಖುಷ್ ಖಬರ್ ಕೊಟ್ಟಿದೆ. ಅಸಲಿಗೆ ಈ ಹಿಂದೆ ಎರಡು ಬಾರಿ ಪುಷ್ಪ-2 ರಿಲೀಸ್ ಪೋಸ್ಟ್ ಪೋನ್ ಆಗಿತ್ತು. ಸೋ ಇದೀಗ ಡಿಸೆಂಬರ್​ 6ಕ್ಕೆ ಸಿನಿಮಾ ರಿಲೀಸ್ ಆಗುತ್ತಾ ಅನ್ನೋ ಬಗ್ಗೆಯೂ ಫ್ಯಾನ್ಸ್ ನಡುವೆ ಅನುಮಾನ ಇತ್ತು. ಆದ್ರೆ ಡಿಸೆಂಬರ್ 6ಕ್ಕೂ ಒಂದು ದಿನ ಮೊದಲೇ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ನ್ಯೂಸ್ ಕೊಟ್ಟಿದೆ ಪುಷ್ಪ ತಂಡ. ಹೌದು ಡಿಸೆಂಬರ್ 5 ಗುರುವಾರದ ದಿನವೇ ವರ್ಲ್ಡ್ ವೈಡ್ ಸಿನಿಮಾ ತೆರೆಗೆ ಬರಲಿದೆ. ಈಗಾಗ್ಲೇ ಸಿನಿಮಾದ ಕೆಲಸಗಳನ್ನೆಲ್ಲಾ ಕಂಪ್ಲೀಟ್ ಮಾಡಿರೋ ಟೀಂ ಆಫೀಷಿಯಲ್ ಆಗಿ ಈ ಅನೌನ್ಸ್​ ಮೆಂಟ್ ಮಾಡಿದ್ದು, ಪುಷ್ಪರಾಜ್​ನ ಎದುರುಗೊಳ್ಳೋದಕ್ಕೆ ಸಜ್ಜಾಗಿ ಅಂತ ಫ್ಯಾನ್ಸ್​ಗೆ ಸೂಚನೆ ಕೊಟ್ಟಿದೆ.