Apr 9, 2023, 2:49 PM IST
ಪುಷ್ಪ 2 ಚಿತ್ರೀಕರಣವು ಸದ್ದಿಲ್ಲದೇ ನಡೆಯುತ್ತಿದೆ. ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರದ ನಿರ್ದೇಶಕ ಸುಕುಮಾರ್, ಇದೀಗ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿದ್ದು,ಟೀಸರ್ ಭಾರಿ ಕುತೂಹಲ ಮೂಡಿಸಿದೆ.ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಚಿತ್ರತಂಡ ಗಿಫ್ಟ್ ನೀಡಿದ್ದು ಪುಷ್ಪ 2 ಟೀಸರ್ ರಿಲೀಸ್ ಮಾಡಿದ್ದಾರೆ.ಇನ್ನು ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುವ ಪುಷ್ಪ, ಪೊಲೀಸರ ಬುಲೆಟ್ ಗುಂಡಿನಿಂದ ಗಾಯಗೊಂಡಿದ್ದಾನೆ. ದಟ್ಟ ಅರಣ್ಯದಲ್ಲಿ ಆತ ನಾಪತ್ತೆ ಆಗಿದ್ದಾನೆ. ಇನ್ನು ಪುಷ್ಪನಿಗಾಗಿ ಪೊಲೀಸರು ನಡೆಸುವ ಹುಡುಕಾಟ ಒಂದು ಕಡೆಯಾದರೆ, ಜನರು ಪುಷ್ಪರಾಜನ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಹಾಗೇ ಕಾಡಿನಲ್ಲಿ ಇಟ್ಟ ರಹಸ್ಯ ಕ್ಯಾಮೆರಾದಲ್ಲಿ ಪುಷ್ಪ ಸೆರೆಯಾಗಿದ್ದು, ಆ ಕ್ಯಾಮೆರಾದ ಮುಂದೆ ಹುಲಿಯೊಂದು ನಡೆದುಕೊಂಡು ಬಂದು ಘರ್ಜಿಸುತ್ತದೆ ಆ ಹುಲಿಯ ಪಕ್ಕದಲ್ಲೇ ಪುಷ್ಪ ನಡೆದು ಬರುವಂತ ದೃಶ್ಯವನ್ನು ಪುಷ್ಪ ಟೀಸರ್ ನಲ್ಲಿ ನೋಡ ಬಹುದಾಗಿದೆ.