Apr 14, 2023, 4:35 PM IST
'ಪುಷ್ಪ' ಚಿತ್ರದಲ್ಲಿ ನಿರ್ದೇಶಕ ಸುಕುಮಾರ್ ಒಬ್ಬ ರಕ್ತಚಂದನ ಸ್ಮಗ್ಲರ್ ಕಥೆಯನ್ನು ಹೇಳಲು ಬಯಸಿದ್ದು, 'ಪುಷ್ಪ'ರಾಜ್ ಚಿಕ್ಕಂದಿನಿಂದಲೂ ಭಾರೀ ಶೋಷಣೆಗೆ ಗುರಿಯಾಗುತ್ತಾನೆ. ಆರ್ಥಿಕವಾಗಿ, ವಂಚಿತನಾಗಿದ್ದನ್ನು ಹೇಗಾದರೂ ಮಾಡಿ ಪಡೆಯಬೇಕು ಎಂದುಕೊಳ್ಳುತ್ತಾನೆ. KGF' ಚಿತ್ರದಲ್ಲಿ ಪ್ರಶಾಂತ್ ನೀಲ್ ರಾಕಿ ಪಾತ್ರವನ್ನು ಕೂಡ ಇದೇ ರೀತಿ ಡಿಸೈನ್ ಮಾಡಿದ್ದರು. ರಾಕಿ ಭಾಯ್ ಗುರಿ ಒಂದೇ. ಆತನಿಗೆ ದಯಾ ದಾಕ್ಷಿಣ್ಯ ಇರುವುದಿಲ್ಲ. ತನ್ನ ಗುರಿ ಸಾಧನೆಗಾಗಿ ದೊಡ್ಡ ದೊಡ್ಡ ಡಾನ್‌ಗಳನ್ನು ಕೊಲ್ಲುತ್ತಾನೆ.ಎರಡೂ ಚಿತ್ರದಲ್ಲೂ ಹೀರೋಗಳನ್ನ ರಾಕ್ಷಸನಂತೆ ಬಿಂಬಿಸಿ ಕೊನೆಗೆ ಅವರಲ್ಲು ಮಾನವೀಯತೆ ಸಹಾಯ ಗುಣ ಇದೆ ಎಂದು ತೋರಿಸಿ ನಿರ್ದೇಶಕರು ಗೆದ್ದಿದ್ದರು. ಈ ಹಿಂದೆ 'ಪುಷ್ಪ' ಸಿನಿಮಾ ನೋಡಿದವರು ಇದು 'KGF' ಕಾಪಿ ಎಂದಿದ್ದರು.ಇದು ಚಿನ್ನದ ಕಥೆ, ಅದು ರಕ್ತ ಚಂದನ ಕಥೆ ಅಷ್ಟೇ ಉಳಿದಿದ್ದೇಲ್ಲಾ ಸೇಮ್ ಅಂದಿದ್ದರು.