ಅಲ್ಲು ಅರ್ಜುನ್ ಗೆ ಮತ್ತೆ ಜೈಲಿನ ಭೀತಿ, ಪುಷ್ಪನಿಗೆ ಶಿಕ್ಷೆ ಖಚಿತ, ಸಿಎಂ ರೇವಂತ್ ರೆಡ್ಡಿ ಶಪಥ!

Dec 24, 2024, 4:29 PM IST

ಒಂದು ಕಡೆಗೆ ಪುಷ್ಪ-2 ಮೂವಿ ಬಾಕ್ಸ್ ಆಫೀಸನಲ್ಲಿ 1500 ಕೋಟಿ ಕ್ಲಬ್ ಸೇರಿ ಮುನ್ನುಗ್ತಾ ಇದೆ. ಆದ್ರೆ ಈ ಸಕ್ಸಸ್​ ನ ಸೆಲೆಬ್ರೇಟ್ ಮಾಡೋ ಮೂಡ್ ಲ್ಲಿ ಅಲ್ಲು ಅರ್ಜುನ್ ಖಂಡಿತ ಇಲ್ಲ. ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತಕ್ಕೆ ಮಹಿಳೆ ಬಲಿಯಾದ ಕೇಸ್ ನಲ್ಲಿ ಈಗಾಗ್ಲೇ ಜೈಲು ಸೇರಿ ಬಂದಿರೋ ಅಲ್ಲು ಅರ್ಜುನ್​ಗೆ ಮತ್ತೆ ಜೈಲು ಸೇರುವ ಭೀತಿ ಕಾಡ್ತಾ ಇದೆ. ಯಾಕಂದ್ರೆ ಸಿಎಂ ರೇವಂತ್ ರೆಡ್ಡಿ ಪುಷ್ಪನಿಗೆ ಶಿಕ್ಷೆ ಕೊಡಿಸಿಯೇ ಸಿದ್ದ ಅಂತ ಪಣತೊಟ್ಟು ನಿಂತಿದ್ದಾರೆ,ಶನಿವಾರ ತೆಲಂಗಾಣ ಸದನದಲ್ಲೇ ಅಲ್ಲು ಅರ್ಜುನ್​ ವಿರುದ್ದ  ವಾಗ್ದಾಳಿ ನಡೆಸಿದ್ದ ಸಿಎಂ ರೇವಂತ್ ರೆಡ್ಡಿ, ಆತನಿಗೆ ಶಿಕ್ಷೆ ಕೊಡಿಸಿಯೇ ಕೊಡಿಸ್ತಿನಿ ಅಂದಿದ್ರು. ಇದಕ್ಕೆ ಪ್ರತಿಯಾಗಿ ಅಂದು ಸಂಜೆ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದ ಅಲ್ಲು ಅರ್ಜುನ್, ತಾನು ಪೊಲೀಸ್ ರಿಂದ ಅನುಮತಿ ಪಡೆದಿದ್ದೆ ತನ್ನದೇನೂ ತಪ್ಪಿಲ್ಲ ಅಂದಿದ್ರು. ಆದ್ರೆ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಎಸಿಪಿ ವಿಷ್ಣುಮೂರ್ತಿ, ಅಲ್ಲು ಅರ್ಜುನ್ ಗೆ ಪೊಲೀಸ್ ಅನುಮತಿ ಇರಲಿಲ್ಲ. ಅವರು ದುಡ್ಡಿನ ದರ್ಪದಿಂದ ಬಾಯಿಗೆ ಬಂದಂತೆ ಮಾತನಾಡ್ತಾ ಇದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.