Dec 23, 2024, 5:08 PM IST
ಇಷ್ಟೆಲ್ಲ ದುರಂತ ನಡೆದರೂ ಇವನಂಥ ಮನುಷ್ಯ ಎಂದ ರೇವಂತ್; ಚಾರಿತ್ರ್ಯ ಹರಣ ಮಾಡಲಾಗ್ತಿದೆ ಎಂದ ಸ್ಟೈಲಿಸ್ ಸ್ಟಾರ್ ಅಲ್ಲು; ಬೆನಿಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಸಿಎಂ ರೇವಂತ್ ಕೊಕ್ಕೆ; ‘ಸರ್ಕಾರದಿಂದ ಚಿತ್ರಗಳಿಗೆ ಯಾವುದೇ ಸೌಲಭ್ಯ ಕೊಡಲ್ಲ’ ತೆಲುಗು ಚಿತ್ರರಂಗಕ್ಕೆ ಸಿಎಂ ರೇವಂತ್ ರೆಡ್ಡಿ ಬಿಗ್ ಶಾಕ್ ನಿಡಿದ್ದಾರೆ. ಇನ್ನು ಸಿಎಂ ರೇವಂತ್ ರೆಡ್ಡಿ ವಿರುದ್ಧ ಅಲ್ಲು ಅರ್ಜುನ್ ಆಕ್ರೋಶ ಗೊಂಡಿದ್ದು ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ನಟ ಅಲ್ಲು ಅರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆಯಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್ ಮಾಡಬೇಡಿ ಎಂದಿದ್ದಾರೆ.